ಅನಿಲ್ ಅಂಬಾನಿ ವೈರಲ್ ವೀಡಿಯೊ ನಂತರ ಗಾಲ್ಫ್ ಕೋರ್ಸ್ ಮೈದಾನ ಮುಚ್ಚಿದ ಅಧಿಕಾರಿಗಳು

Update: 2021-05-03 18:19 GMT

ಸತಾರಾ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ನಡೆದಾಡುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜನಪ್ರಿಯ ಗಿರಿಧಾಮ ಮಹಾಬಲೇಶ್ವರದಲ್ಲಿ ಪೌರಾಧಿಕಾರಿಗಳು ಖಾಸಗಿ ಕ್ಲಬ್ ಗೆ ತನ್ನ ಗಾಲ್ಫ್ ಕೋರ್ಸ್ ಮೈದಾನವನ್ನು ಮುಚ್ಚುವಂತೆ ಕೇಳಿಕೊಂಡಿದ್ದಾರೆ.

ಮಹಾಬಲೇಶ್ವರದಲ್ಲಿರುವ ಅಂಬಾನಿ ಅವರು ಪತ್ನಿ ಟೀನಾ ಮತ್ತು ಮಕ್ಕಳೊಂದಿಗೆ ಇತ್ತೀಚೆಗೆ ಗಾಲ್ಫ್ ಕೋರ್ಸ್‌ನಲ್ಲಿ ಸಂಜೆ ವಾಕ್ ಮಾಡುತ್ತಿರುವುದು ಕಂಡುಬಂದಿತ್ತು. ರಾಜ್ಯದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧಗಳಿದ್ದರೂ ಅನಿಲ್ ಅಂಬಾನಿ ಗಾಲ್ಫ್ ಕೋರ್ಸ್ ನಲ್ಲಿ ಓಡಾಡಿದ ದೃಶ್ಯವು  ಚರ್ಚೆಗೆ ಗ್ರಾಸವಾಗಿತ್ತು. ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ನಿರ್ಬಂಧಗಳ ಸಮಯದಲ್ಲಿ ಬೆಳಿಗ್ಗೆ ಅಥವಾ ಸಂಜೆ ನಡಿಗೆಗೆ ಜನರು ಅಲ್ಲಿಗೆ ಬರುವುದಕ್ಕೆ ತಡೆ ಹೇರದೇ ಇರುವುದಕ್ಕೆ ವಿಪತ್ತು ನಿರ್ವಹಣಾ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ  ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ ಎಂದು ಮಹಾಬಲೇಶ್ವರ ಕೌನ್ಸಿಲ್ ಮುಖ್ಯ ಅಧಿಕಾರಿ ಪಲ್ಲವಿ ಪಾಟೀಲ್ ಅವರು ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

"ಅನಿಲ್ ಅಂಬಾನಿ ಮತ್ತು ಅವರ ಕೆಲವು ಕುಟುಂಬ ಸದಸ್ಯರು ಮೈದಾನದಲ್ಲಿ ನಡೆದಾಡುವ ವೀಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಪರಿಶೀಲಿಸಿದ ನಂತರ, ನಾವು ಮೈದಾನವನ್ನು ಹೊಂದಿರುವ ದಿ ಕ್ಲಬ್‌ನಲ್ಲಿ ನೋಟಿಸ್ ನೀಡಿದ್ದೇವೆ, ಬೆಳಿಗ್ಗೆ ಮತ್ತು ಸಂಜೆ ನಡಿಗೆಗಾಗಿ ಬರುವ ಜನರ ಪ್ರವೇಶವನ್ನು ತಡೆಯುವಂತೆ ಅವರಿಗೆ ಸೂಚನೆ ನೀಡಿದ್ದೇವೆ, ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News