ಮೇ 7: ವೈದ್ಯಾಧಿಕಾರಿ, ಶುಶ್ರೂಷಾಧಿಕಾರಿ ಹುದ್ದೆಗೆ ನೇರ ಸಂದರ್ಶನ

Update: 2021-05-04 16:42 GMT

ಮಂಗಳೂರು, ಮೇ 4: ಜಿಲ್ಲಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಗಿ ಕಾರ್ಯನಿರ್ವಹಿಸುತ್ತಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ವ್ಶೆದ್ಯಾಧಿಕಾರಿ ಹಾಗೂ ಶುಶ್ರೂಷಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ 2021ರ ಸೆಪ್ಟೆಂಬರ್ 30ರವರೆಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಮೇ 7ರಂದು ಪೂ.11 ಗಂಟೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ಕರೆಯಲಾಗಿದೆ.

ತಾತ್ಕಾಲಿಕ ಹುದ್ದೆಗಳ ವಿವರ: ತಜ್ಞರು -ಪಿಜಿಯನ್ ಹುದ್ದೆಗಳ ಸಂಖ್ಯೆ-5, ಎಂಬಿಬಿಎಸ್, ಎಂಡಿ ಮೆಡಿಕಲ್ ಕೌನ್ಸಿಲಿಂಗ್ ರಿಜಿಸ್ಟರ್ ಆಗಿರಬೇಕು. ಅನಸ್ತೆಟಿಸ್ಟ್, ಹುದ್ದೆಗಳ ಸಂಖ್ಯೆ-5 ಎಂಬಿಬಿಎಸ್, ಎಂಡಿ, ಡಿಎ, ಡಿಎನ್‌ಬಿ, ಮೆಡಿಕಲ್ ಕೌನ್ಸಿಲಿಂಗ್ ರಿಜಿಸ್ಟರ್ ಆಗಿರಬೇಕು.

ಶುಶ್ರೂಷಾಧಿಕಾರಿ- ಹುದ್ದೆಗಳ ಸಂಖ್ಯೆ-50, ಡಿಪ್ಲೊಮಾ ನರ್ಸಿಂಗ್/ಬಿಎಸ್ಸಿ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು) ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಧೀಕೃತ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಮಾಹಿತಿಗಾಗಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ ದೂ.ಸಂ: 0824-2413205, 0824-2421351, 0824-2425137 ಅಥವಾ ಇ-ಮೇಲ್ ವಿಳಾಸ dsdkannada-hfws@karnataka.gov.in: ನ್ನು ಸಂಪರ್ಕಿಸಬಹುದು ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News