ಕೋವಿಡ್ ನಿರೋಧಕ ಲಸಿಕೆ ಹಾಕದವರಿಗೆ ವಿದೇಶ ಪ್ರಯಾಣ ನಿಷೇಧಿಸಿದ ಕುವೈತ್

Update: 2021-05-04 17:03 GMT

ಮೆಲ್ಬೋರ್ನ್,ಮೇ4: ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಹಾವಳಿಯನ್ನು ಕಟ್ಟಿಹಾಕುವ ಪ್ರಯತ್ನವಾಗಿ ಕುವೈತ್ ಸರಕಾರವು ಕೋವಿಡ್-19 ನಿರೋಧಕ ಲಸಿಕೆ ಹಾಕಿಸಿಕೊಳ್ಳದ ತನ್ನ ನಿವಾಸಿಗಳು ವಿದೇಶಕ್ಕೆ ಪ್ರಯಾಣಿಸುವುದನ್ನು ಮೇ 22ರಿಂದ ನಿಷೇಧಿಸಿದೆ.

 ಕುವೈತ್ ಸಂಪುಟದ ಈ ನಿರ್ಧಾರವು ಭಾರೀ ಗೊಂದಲಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಲಸಿಕೆ ಪೂರೈಕೆಯಲ್ಲಿ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಎರಡನೆ ಡೋಸ್‌ನ ಲಸಿಕೆಗಳ ವಿತರಣೆಯನ್ನು ಕುವೈತ್ ವಿಳಂಬಿಸಿದೆ.

ಫೈಝರ್-ಬಯೋನ್‌ಟೆಕ್‌ನ ಲಸಿಕೆಯನ್ನು ಪಡೆದವರು ಎರಡನೆ ಡೋಸ್‌ಗಾಗಿ ಆರು ವಾರ ಹಾಗೂ ಆಕ್ಸ್‌ಫರ್ಡ್-ಅಸ್ಟ್ರಾಝೆನೆಕಾ ಲಸಿಕೆ ಪಡೆದವರು 3-4 ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಆದರೆ ಯಾವುದೇ ದೈಹಿಕ ಆರೋಗ್ಯ ಕಾರಣಕ್ಕಾಗಿ ಲಸಿಕೆಯನ್ನು ಪಡೆಯಲು ಸಾಧ್ಯವಾಗದೆ ಇದ್ದವರಿಗೆ ನೂತನ ಪ್ರಯಾಣ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಈಗಾಗಲೇ ಕುವೈತ್ ಅಧಿಕಾರಿಗಳು, ದೇಶಕ್ಕೆ ಆಗಮಿಸುವ ಅನಿವಾಸಿಗಳ ಆಗಮನವನ್ನು ನಿಷೇಧಿಸಿದ್ದು, ಇದರಿಂದ ಕುವೈತ್‌ನ ಹಲವಾರು ವಿದೇಶಿ ಉದ್ಯೋಗಿಗಳು ಹಾಗೂ ಅವರ ಕುಟುಂಬಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದೀರ್ಘಸಮಯದಿಂದ ಜಾರಿಯಲ್ಲಿರುವ ರಾತ್ರಿಕರ್ಫ್ಯೂ, ಲಸಿಕೆ ಅಭಿಯಾನ ಹಾಗೂ ಕಠಿಣ ನಿರ್ಬಂಧಗಳ ಹೊರತಾಗಿಯೂ ಕುವೈತ್‌ನಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಹೋಗುತ್ತಿದೆ. ಕುವೈತ್‌ನಲ್ಲಿ ಈವರೆಗೆ 2,77,800 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 1590 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News