ಯುರೋಪಿನಲ್ಲಿ ಭಾರತದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳು ಮುಂದೂಡಿಕೆ

Update: 2021-05-05 05:07 GMT

ಲೌಸನ್ನೆ: ಏಶ್ಯದ ದೇಶಗಳಲ್ಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಧಿಸಲಾದ ಅಂತರ್‌ರಾಷ್ಟ್ರೀಯ ಪ್ರಯಾಣ ನಿರ್ಬಂಧದಿಂದಾಗಿ ವಿದೇಶದಲ್ಲಿ ನಿಗದಿಯಾಗಿರುವ ಮುಂಬರುವ ಭಾರತದ ಹಾಕಿ ತಂಡದ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ವಿಶ್ವ ಹಾಕಿ ಸಂಸ್ಥೆ (ಎಫ್‌ಐಎಚ್) ಮಂಗಳವಾರ ತಿಳಿಸಿದೆ.

ಭಾರತದ ಪುರುಷರ ಹಾಕಿ ತಂಡವು ಮೇ 15 ಮತ್ತು 16 ರಂದು ಸ್ಪೇನ್ ವಿರುದ್ಧ ಮತ್ತು ಮೇ 23 ಮತ್ತು 24 ರಂದು ಜರ್ಮನಿಯಲ್ಲಿ ಎರಡು ಪಂದ್ಯಗಳನ್ನು ಆಡುವುದು ಈಗಾಗಲೇ ನಿಗದಿಯಾಗಿತ್ತು. ಜರ್ಮನಿ, ಸ್ಪೇನ್ ಮತ್ತು ಗ್ರೇಟ್ ಬ್ರಿಟನ್‌ನ ಹಾಕಿ ರಾಷ್ಟ್ರೀಯ ಸಂಸ್ಥೆಗಳು ಲಂಡನ್‌ನಲ್ಲಿ ಮೇ 8-9ರಂದು ಆಯೋಜಿಸಿದ್ದ ಪಂದ್ಯಗಳನ್ನು ಸಹ ಮುಂದೂಡಲಾಗಿದೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭಾರತ ಇದೀಗ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News