ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮೆಕ್‌ಗಿಲ್ ಅಪಹರಣ, ಬಿಡುಗಡೆ

Update: 2021-05-05 07:31 GMT

ಮೆಲ್ಬೋರ್ನ್: ಮಾಜಿ ಟೆಸ್ಟ್ ಬೌಲರ್ ಸ್ಟುವರ್ಟ್ ಮೆಕ್‌ಗಿಲ್ ಅವರನ್ನು ದುಷ್ಕರ್ಮಿಗಳು ಅಪಹರಿಸಿ, ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಿದ್ದಾರೆ.  ಅಪಹರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ನಗರದ ಶ್ರೀಮಂತ ಲೋವರ್ ನಾರ್ತ್ ಶೋರ್‌ನಲ್ಲಿ ಕ್ರಿಕೆಟಿಗನನ್ನು ಅಪಹರಿಸಿದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ಮುಂಜಾನೆ ನಡೆದ ದಾಳಿಯಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.

ಮೆಕ್ ಗಿಲ್ ಓರ್ವ ಪ್ರತಿಭಾವಂತ ಬೌಲರ್ ಆಗಿದ್ದು, ಆಸ್ಟ್ರೇಲಿಯಾದ ಪರ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಎಪ್ರಿಲ್ 14 ರಂದು 50 ವರ್ಷದ ಮೆಕ್ ಗಿಲ್ ರೊಂದಿಗೆ ನಡೆದ ಮೂವರು ಘರ್ಷಣೆ ಯಲ್ಲಿ ತೊಡಗಿದ್ದು ಬಳಿಕ ಅವರನ್ನು ವಾಹನಕ್ಕೆ ಕಟ್ಟಿಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಿಂದ ಹೊರಗೆ ಅವರನ್ನು ಕರೆದೊಯ್ಯಲಾಯಿತು.  ಅಲ್ಲಿ ಒಂದು ಗಂಟೆ ಒತ್ತೆ ಸೆರೆಯಲ್ಲಿ ಇಟ್ಟುಕೊಂಡ ನಂತರ ಬಿಡುಗಡೆಯಾಗುವ ಮೊದಲು ಅವರ ಮೇಲೆ ಹಲ್ಲೆ ನಡೆಸಿ, ಬಂದೂಕಿನಿಂದ ಬೆದರಿಕೆ ಹಾಕಲಾಯಿತು ಎಂದು ಎನ್ ಎಸ್ ಡಬ್ಲ್ಯು  ಪೊಲೀಸ್ ಅಧೀಕ್ಷಕ ಆಂಥೋನಿ ಹಾಲ್ಟನ್ ಮಾಧ್ಯಮಕ್ಕೆ ತಿಳಿಸಿದರು.

ನಾಲ್ವರು ಅಪಹರಣಕಾರರಲ್ಲಿ ಓರ್ವ ಮೆಕ್‌ಗಿಲ್ ಪರಿಚಿತನಾಗಿದ್ದ, ಈ ಘಟನೆಯಿಂದ ಅವರು  ಸಾಕಷ್ಟು ಬೆದರಿದ್ದಾರೆ ಎಂದು ಹಾಲ್ಟನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News