ಕೋವಿಡ್‌-19 ಕುರಿತ ಡ್ಯಾಶ್‌ ಬೋರ್ಡ್‌ ಅನ್ನು ನಿರ್ವಹಿಸಿ: ರಾಜ್ಯ ಸರಕಾರಗಳಿಗೆ ಮಾನವ ಹಕ್ಕು ಆಯೋಗ ಮನವಿ

Update: 2021-05-05 17:01 GMT

ಹೊಸದಿಲ್ಲಿ, ಮೇ 5: ಮೂಲಭೂತ ಮಾನವ ಹಕ್ಕಾದ ಚಿಕಿತ್ಸೆಯನ್ನು ಪ್ರತಿಯೊಬ್ಬ ಪ್ರಜೆ ಪಡೆಯಲು ಐಸೋಲೇಶನ್ ಹಾಸಿಗೆ, ಆಮ್ಲಜನಕ ಸಂಪರ್ಕ ಇರುವ ಹಾಸಿಗೆ, ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್ ಸಂಪರ್ಕ ಇರುವ ಹಾಸಿಗಳ ಲಭ್ಯತೆಯ ವಾಸ್ತವ ಸಮಯವನ್ನು ಪ್ರದರ್ಶಿಸಲು ಸಾರ್ವತ್ರಿಕವಾಗಿ ಕಾರ್ಯ ನಿರ್ವಹಿಸುವ ಕೋವಿಡ್-19 ಡ್ಯಾಸ್ಬೋರ್ಡ್ ಅನ್ನು ನಿರ್ವಹಿಸಬೇಕು ಎಂದು ಮಾನವ ಹಕ್ಕು ಆಯೋಗ (ಎನ್ಎಚ್ಆರ್ಸಿ) ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. 

ಕೊರೋನದ ಎರಡನೇ ಅಲೆಯ ನಡುವೆ ಮಂಗಳವಾರ ಸಂಜೆ ವಿಸ್ತೃತ ಸಲಹೆಗಳನ್ನು ರವಾನಿಸಿರುವ ಎನ್ಎಚ್ಆರ್ಸಿ, ದೇಶದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ ಬೆಲೆಯಲ್ಲಿ ತಾರತಮ್ಯ ಮಾಡಬಾರದು. ಸಾಧ್ಯವಾದರೆ ಖಾಸಗಿ ಅಥವಾ ಸರಕಾರಿ ಎಂದು ಪರಿಗಣಿಸದೆ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಬೇಕು ಎಂದು ಹೇಳಿದೆ. ದುರ್ಬಲರು ಹಾಗೂ ತಿರಸ್ಕೃತರು, ಮನೆರಹಿತರು, ಕೈದಿಗಳು, ವಲಸೆ ಕಾರ್ಮಿಕರು ಹಾಗೂ ಭಿಕ್ಷುಕರಂತಹ ಹೆಚ್ಚು ಅಪಾಯದಲ್ಲಿರುವವರಿಗೆ ಲಸಿಕೆ ತಲುಪಬೇಕು. ಅಲ್ಲದೆ, ಆಧಾರ್ ಕಾರ್ಡ್ ಅಥವಾ ಇತರ ದಾಖಲೆಗಳನ್ನು ಹೊಂದಿರದವರಿಗೂ ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ಎನ್ಎಚ್ಆರ್ಸಿ ಸಲಹೆಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News