ತಮಿಳುನಾಡು: ಸರಕಾರ ರಚನೆಗೆ ಸ್ಟಾಲಿನ್ ಹಕ್ಕುಮಂಡನೆ

Update: 2021-05-05 18:36 GMT

ಚೆನ್ನೈ, ಮೇ 5: ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಬುಧವಾರ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನೂತನ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ.

ಡಿಎಂಕೆ ಮಹಾ ಕಾರ್ಯದರ್ಶಿ ದುರೈಮುರುಗನ್, ಖಜಾಂಚಿ ಟಿಆರ್ ಬಾಲು, ಮುಖ್ಯ ಕಾರ್ಯದರ್ಶಿ ಕೆಎನ್ ನೆಹ್ರು ಮತ್ತು ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಈ ಸಂದರ್ಭ ಜತೆಗಿದ್ದರು ಎಂದು ಡಿಎಂಕೆ ವಕ್ತಾರರು ಹೇಳಿದ್ದಾರೆ. ಮಂಗಳವಾರ ಸ್ಟಾಲಿನ್‌ರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

ಶುಕ್ರವಾರ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಸ್ಟಾಲಿನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 159 ಸ್ಥಾನಗಳನ್ನು ಹೊಂದಿದ್ದು ಇದರಲ್ಲಿ ಡಿಎಂಕೆ 133, ಕಾಂಗ್ರೆಸ್ 18, ವಿದುಥಲೈ ಚಿರುಥೈಗಲ್ ಕಚ್ಚಿ ಪಕ್ಷ 4, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳನ್ನು ಗೆದ್ದಿವೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News