×
Ad

ಸುಶಾಂತ್‌ ಸಿಂಗ್‌ ರಜಪೂತ್‌ ಅಭಿನಯದ ಚಿಚೋರೆ ಸಿನಿಮಾದ ನಟಿ ಅಭಿಲಾಷಾ ಪಾಟೀಲ್‌ ಕೋವಿಡ್‌ ಗೆ ಬಲಿ

Update: 2021-05-06 14:41 IST

ಮುಂಬೈ:  ಕೊರೋನದ ಎರಡನೆ ಅಲೆಯು  ಮೊದಲ ಅಲೆಗಿಂತ ಹೆಚ್ಚು ಮಾರಕವಾಗಿದೆ ಎಂದು ಸಾಬೀತಾಗಿದೆ, ದೇಶಾದ್ಯಂತ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಹಿಂದಿ ಹಾಗೂ ಮರಾಠಿ ಚಲನಚಿತ್ರ ನಟಿ ಅಭಿಲಾಷಾ ಪಾಟೀಲ್ ಅವರು ಕೋವಿಡ್ -19 ಸಂಬಂಧಿಸಿದ ಸ,ಮಸ್ಯೆಯಿಂದಾಗಿ ಬುಧವಾರ ನಿಧನರಾಗಿದ್ದಾರೆ.

ಅಭಿಲಾಷಾ ಪಾಟೀಲ್ ಜನಪ್ರಿಯ ಮರಾಠಿ ಚಲನಚಿತ್ರಗಳಾದ ತುಜಾ ಮಾಂಜಾ ಅರೇಂಜ್ ಮ್ಯಾರೇಜ್, ಪಿಪ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಬದ್ರೀನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಜ್, ಹಾಗೂ ಚಿಚೋರೆಯಂತಹ ಅನೇಕ ಜನಪ್ರಿಯ ಬಾಲಿವುಡ್ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ, ಚಿಚೋರೆ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಪ್ರಮುಖ ಪಾತ್ರ ದಲ್ಲಿ ಅಭಿನಯಿಸಿದ್ದಾರೆ.

ಅಭಿಲಾಷಾ ಅವರು  ಪತಿ ಮತ್ತು ಮಗನನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News