ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು: ಸಂಸದೆ ಶೋಭಾ

Update: 2021-05-06 10:10 GMT

ಉಡುಪಿ : ಕೊರೋನ ಸೋಂಕು ನಿಯಂತ್ರಣಕ್ಕಾಗಿ ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಕರ್ಫ್ಯೂ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ಬಾರಿಯಂತೆ ಗಂಭೀರವಾಗಿ ಕರ್ಪ್ಯೂ ಮಾಡಬೇಕು. ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಪೂರ್ಣ ಲಾಕ್ಡೌನ್ ಮಾಡಬೇಕು. ಜನ ಈಗಿನಂತೆ ಓಡಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಮದುವೆ, ದೇವಸ್ಥಾನ ಕಾರ್ಯಕ್ರಮ, ಭೂತಾರಾಧನೆ ಎಲ್ಲವೂ ನಡೆಯುತ್ತಿದೆ. ಜನ ಹೆಚ್ಚು ಬೆರೆಯುವುದರಿಂದ ರೋಗ ಹರಡುತ್ತದೆ. ಮುಂಬೈ ಬೆಂಗಳೂರಿನಿಂದಲೂ ಜನ ಉಡುಪಿ ಜಿಲ್ಲೆಗೆ ಬರುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡಿಸಬೇಕು. ಇವತ್ತಿಂದ ರ್ಯಾಪಿಡ್ ಟೆಸ್ಟ್ ಆರಂಭಿಸಲು ಸೂಚನೆ ನೀಡಿದ್ದೇನೆ. ಹೋಂ ಕ್ಚಾರಂಟೈನ್ ಕಡ್ಡಾಯ ಮಾಡಬೇಕು. 15 ದಿನಗಳ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News