ಬೆಳ್ಳೆ ಗ್ರಾಮ ಪಂಚಾಯತ್ ಕೋವಿಡ್ ಟಾಸ್ಕ್‌ಪೋರ್ಸ್ ಸಭೆ

Update: 2021-05-06 10:57 GMT

ಶಿರ್ವ, ಮೇ 6: ಬೆಳ್ಳೆ ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣ ಕಾರ್ಯಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯ ವಾಗಿ ಪಾಲಿಸುವುದರ ಜೊತೆಗೆ ಕೊರೋನಾ ಸಂತ್ರಸ್ಥರಿಗೆ ಸರ್ವ ರೀತಿಯ ನೆರವು ಒದಗಿಸುವವುದರೊಂದಿಗೆ ಗ್ರಾಮದ ಆಯಾ ವಾರ್ಡ್‌ಗಳ ಮೇಲುಸ್ತುವಾರಿ ಯನ್ನು ವಾರ್ಡ್ ಸದಸ್ಯರೇ ಖುದ್ದಾಗಿ ಪರಿಶೀಲಿಸಿ ಅವರಿಗೆ ಅಗತ್ಯ ನೆರವನ್ನು ನೀಡುವ ಕುರಿತು ಬುಧವಾರ ಗೀತಾ ಮಂದಿರ ದಲ್ಲಿ ನಡೆದ ಕೋವಿಡ್ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಿರ್ಣಯಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ ಮಾತನಾಡಿ, ದುರ್ಬಲ ಹಾಗೂ ಬಡ ಕೋವಿಡ್ ಸಂತ್ರಸತಿರಿಗೆ ಊಟದ ವ್ಯವಸ್ಥೆ, ಗ್ರಾಮಕ್ಕೆ ಹೊರ ಜಿಲ್ಲೆ, ಇನ್ನಿತರ ಪ್ರದೇಶಗಳಿಂದ ಬರುವವರ ಬಗ್ಗೆ ಎಚ್ಚರಿಕೆ ವಹಿಸುವುದು, ಕೋವಿಡ್ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ಟಾಸ್ಕ್ ಪೋರ್ಸ್ ಸಮಿತಿಗೆ ಸಂಪೂರ್ಣ ಅವಕಾಶವಿದ್ದು, ಎಲ್ಲರೂ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳುವುದು ಅಗತ್ಯ ವಾಗಿದೆ ಎಂದು ತಿಳಿಸಿದರು.

ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮನಾಭ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ಸಂಧ್ಯಾ ಎಂ.ಶೆಟ್ಟಿ, ಗ್ರಾಮ ಕರಣಿಕ ಪ್ರದೀಪ್, ಶಿರ್ವ ಪೋಲಿಸ್ ಠಾಣೆಯ ಬೀಟ್ ಸಿಬ್ಬಂದಿ ಸೋಮಪ್ಪ, ಆರೋಗ್ಯ ಇಲಾಖೆಯ ದಾಕ್ಷಾಯಿನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News