ಉಡುಪಿ: ನಿರಾಶ್ರಿತರಿಗೆ ತಾತ್ಕಾಲಿಕ ಪುರ್ನವಸತಿ ಕೇಂದ್ರ ಸ್ಥಾಪನೆಗೆ ಆಗ್ರಹ

Update: 2021-05-06 10:58 GMT

ಉಡುಪಿ, ಮೇ 6: ನಗರದ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳ, ಅಂಗಡಿ ಜಗುಲಿಗಳಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರು ಮತ್ತು ಅನಾರೋಗ್ಯ ಪೀಡಿತರಕು ಬಹಳ ಸಂಖ್ಯೆಯಲ್ಲಿದ್ದು, ಇವರಿಗೆ ತಾತ್ಕಾಲಿಕ ಪುನರ್ವಸತಿ ಕೆಂದ್ರವನ್ನು ಸ್ಥಾಪಿಸಿ ಆಶ್ರಯ ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮಾಸ್ಕಿನ ಬಳಕೆ, ಸಾಮಾಜಿಕ ಅಂತರ ಮೊದಲಾದ ಕೋವಿಡ್ ತಡೆಗಟ್ಟುವ ಸುರಕ್ಷಿತ ವಿಧಾನಗಳು ಇವರಿಂದ ಸರಿಯಾಗಿ ಪಾಲನೆ ಯಾಗುತ್ತಿಲ್ಲ. ಅಲ್ಲಲ್ಲಿ ಕೆಮ್ಮಿ ಉಗುಳುವುದು, ಗುಂಪು ಸೇರುವುದು, ತಿರುಗಾಡುವುದು ನಿರಾಶ್ರಿತರಿಂದ ನಡೆಯುತ್ತಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಧಿಗಳನ್ನು ನಡೆಸುವುದು ಕಂಡುಬಂದಿದೆ ಎಂದು ಅವರು ದೂರಿದ್ದಾರೆ.

ಲಾಕ್ಡೌನ್ ಸಡಿಲಿಕೆಯ ಸಮಯದಲ್ಲಿ ಸಾರ್ವಜನಿಕರಿಂದ ಅಗತ್ಯ ವಸ್ತುಗಳ ಖರೀದಿಸುವ ಪ್ರಕ್ರಿಯೆಗಳು ನಗರದ ಮಾರುಕಟ್ಟೆಯಲ್ಲಿ ನಡೆಯುತ್ತದೆ. ಹಸಿದವರ ಹಸಿವು ನಿಗಿಸುವ ಅನ್ನದಾತರು ನಿರಾಶ್ರಿತರ ಬಳಿಗೆ ಬರುತ್ತಾರೆ. ಆ ಸಮಯದಲ್ಲಿ ಸೋಂಕು ಸಾರ್ವಜನಿಕ ವಲಯದಲ್ಲಿ ಪಸರಿಸುವ ಸಾಧ್ಯತೆ ಬಹಳವಾಗಿ ಇರುತ್ತದೆ. ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ನಿರಾಶ್ರಿತರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿ ಸುವ ಅಗತ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ತಾತ್ಕಾಲಿಕ ಪುನರ್ವಸತಿ ಕೆಂದ್ರವನ್ನು ಸ್ಥಾಪಿಸಿ ಅಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವುದು ಸೂಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News