ಮಂಗಳೂರು: ಕಾಂಗ್ರೆಸ್‌ನಿಂದ ಕೋವಿಡ್ ಬ್ರೇಕ್ ದಿ ಚೈನ್ ಅಭಿಯಾನ
ಮಂಗಳೂರು, ಮೇ 6: ಕೋವಿಡ್ ನಿಯಂತ್ರಣ ಮಾಡಬೇಕಾದರೆ ನಿಯಮಗಳನ್ನು ಪಾಲಿಸಬೇಕೆಂಬ ಜನಜಾಗೃತಿಯ ಬ್ರೇಕ್ ದಿ ಚೈನ್ ಅಭಿಯಾನ ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್ 19 ಹೆಲ್ಪ್‌ಲೈನ್ ಸಂಚಾಲಕರಾದ ಐವನ್ ಡಿ ಸೋಜರವರ ನೇತೃತ್ವದಲ್ಲಿ ಇಂದು ನಡೆಯಿತು.
ಕದ್ರಿ ಮಾರುಕಟ್ಟೆಯ ಎದುರು ನಡೆದ ಈ ಅಭಿಯಾನದ ವೇಳೆ, ಅಂಗಡಿ ಬಾಗಿಲುಗಳಲ್ಲಿ, ಮಾರುಕಟ್ಟೆಗಳಲ್ಲಿ, ಮಾಂಸದ ಅಂಗಡಿಗಳಲ್ಲಿ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಧರಿಸಬೇಕೆಂದು, ಸ್ಯಾನಿಟೈಜರ್ ಬಳಕೆ ಮಾಡಬೇಕೆಂದು, ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಹಂಚಿಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಮುಹಮ್ಮದ್ ಕುಂಜತ್‌ತ್ತಬೈಲ್, ಅಶೋಕ್ ಡಿ.ಕೆ., ವಿವೇಕ್ ರಾಜ್ ಪೂಜಾರಿ, ಮಹೇಶ್ ಕುಮಾರ್, ತೆರೆಜಾ ಪಿಂಟೋ, ಶೋಭಾ ಕೇಶವ, ಭಾಸ್ಕರ್ ರಾವ್, ನಾಗೇಂದ್ರ ಕುಮಾರ್, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮಿನ್, ಆಲ್‌ಸ್ಟನ್, ನಜೀರ್ ಬಜಾಲ್, ಯೂಸೂಫ್ ಉಚ್ಛಿಲ್, ಆರೀಫ್ ಬಾವಾ, ಪಿಯುಸ್ ಮೊಂತೆರೊ, ಶಶಿ ಪೂಜಾರಿ, ಅಶಿತ್ ಪಿರೇರಾ, ರಕ್ಷಿತ್ ಸುವರ್ಣ, ಮಿಲಾಜ್ ಅತ್ತಾವರ, ದಿನೇಶ್ ಕುಮಾರ್, ದುರ್ಗಾಪ್ರಸಾದ್, ಅಬಿಬುಲ್ಲ, ಅನಿಲ್ ಕುಮಾರ್, ಸತೀಶ್ ಪೆಂಗಲ್,ಪ್ರವೀಣ್ ಜೇಮ್ಸ್, ಆನಂದ್ ಸೋನ್ಸ್ ಮುಂತಾದವರು ಉಪಸ್ಥಿತರಿದ್ದರು.
ಕೋವಿಡ್ ಹೆಲ್ಪ್‌ಲೈನ್ ವತಿಯಿಂದ ಪತಿದಿನ ಜನಸಂದಣಿಯಿರುವ ಜಾಗದಲ್ಲಿ ಮತ್ತು ಮಾರುಕಟ್ಟೆಗಳ ಮುಂದೆ ಬ್ರೇಕ್ ದಿ ಚೈನ್ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಮೇ 8ರಂದು ಕಾವೂರು, ದಿನಾಂಕ 10ರಂದು ಕಾರ್ ಸ್ಟ್ರೀಟ್, ದಿನಾಂಕ 11ರಂದು ಕಂಕನಾಡಿ ಮುಂತಾದ ಸ್ಥಳಗಳಲ್ಲಿ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.