ಕೊರೋನ ಸೋಂಕಿತರ ಐಸೋಲೇಶನ್ ಕೇಂದ್ರ ಸ್ಥಾಪನೆ; ಶಾಸಕ ಡಾ.ಭರತ್ ಶೆಟ್ಟಿ ಸ್ಥಳ ಪರಿಶೀಲನೆ
ಸುರತ್ಕಲ್, ಮೇ 6: ಸುರತ್ಕಲ್‌ನಲ್ಲಿ ಕೊರೋನ ಸೋಂಕಿತರ ಐಸೋಲೇಶನ್ ಕೇಂದ್ರ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿರುವ ಶಾಸಕ ಡಾ.ಭರತ್ ಶೆಟ್ಟಿ ಗುರುವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಸುರತ್ಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಹಾಸ್ಟೆಲ್, ಎನ್‌ಐಟಿಕೆ ಹಾಸ್ಟೆಲ್ ಹಾಗೂ ಹೊಸಬೆಟ್ಟುವಿನಲ್ಲಿರುವ ಪ್ರಾಕೃತಿಕ ವಿಕೋಪ ನಿರ್ವಹಣಾ ಭವನವನ್ನು ಪರಿಶೀಲಿಸಲಾಯಿತು.
ಎನ್‌ಐಟಿಕೆಯಲ್ಲಿ ಹಾಸ್ಟೆಲ್‌ನ ಮೂರು ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಇನ್ನೂರು ಬೆಡ್‌ಗಳ ಸಾಮರ್ಥ್ಯವುಳ್ಳ ಕೇಂದ್ರವನ್ನು ಸಿದ್ದಗೊಳಿ ಸಲಾಗಿದೆ. ಅವಶ್ಯಕತೆ ಬಿದ್ದರೆ ಮತ್ತೆ ಮುನ್ನೂರು ಬೆಡ್‌ಗಳ ಐಸೋಲೇಶನ್ ಕೇಂದ್ರವನ್ನು ತೆರೆಯಬಹುದಾಗಿದೆ. ಸುಮಾರು 1ಸಾವಿರಕ್ಕೂಅಧಿಕ ರೋಗಿಗಳ ನಿಗಾಕ್ಕೆ ಇಲ್ಲಿ ಅವಕಾಶ ಕಲ್ಪಿಸಬಹುದಾಗಿದೆ. ಹೊಸಬೆಟ್ಟುವಿನಲ್ಲಿರುವ ಪ್ರಕೃತಿ ವಿಕೋಪ ನಿರ್ವಹಣಾ ಭವನವನ್ನು ಕೂಡ ಪರಿಶೀಲಿ ಸಲಾಗಿದ್ದು, ಸ್ಥಳೀಯರಿಗೆ ಅಗತ್ಯವಿದ್ದರೆ ಬಳಕೆಗೆ ಸಿಗಲು ಸೂಕ್ತ ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ಕೊರೋನ ಪಾಸಿಟವ್ ಬಂದರೂ ಮನೆಯಲ್ಲಿರದೆ ಅನಗತ್ಯವಾಗಿ ತಿರುಗಾಡಿ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿರುವ ವರದಿಗಳು ಬರುತ್ತಿದೆ. ಇದನ್ನು ತಡೆಯಲು ಹಾಗೂ ಪಾಸಿಟವ್ ಆದವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಐಸೋಲೇಶನ್ ಸೆಂಟರ್ ಅಗತ್ಯವಾಗಿದೆ. ಆಸ್ಪತ್ರೆಗಳಲ್ಲಿ ಕೊರೋನ ಸೊಂಕಿತರ ಚಿಕಿತ್ಸೆಗೆ ಐಸಿಯು ಹೊರತು ಪಡಿಸಿ ಬೆಡ್‌ಗಳ ಕೊರತೆಯಿಲ್ಲ. ಐಸೋಲೇಶನ್ ಕೇಂದ್ರವನ್ನು ಸೋಂಕಿನ ಸರಪಳಿ ನಿಲ್ಲಿಸಲು ಮಾತ್ರ ಬಳಸಲಾಗುತ್ತದೆ. ಇಲ್ಲಿ ಸಧಾರಣ ಚಿಕಿತ್ಸೆ, ಕೌಟುಂಬಿಕವಾಗಿ ಯಾರಿಗಾದರೂ ಪ್ರತ್ಯೇಕವಾಗಿರಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಚುತ ಊಟವಿದ್ದು, ಮನೆಯಿಂದಲೂ ಊಟ ತರಿಸಿಕೊಳ್ಳಬಹುದಾಗಿದೆ. ವೈದ್ಯಾಧಿಕಾರಿಗಳು,ನರ್ಸ್‌ಗಳು ವೈದ್ಯಕೀಯ ಸೇವೆಗೆ ಲಭ್ಯರಿರುತ್ತಾರೆ.ಸುರತ್ಕಲ್ ಮಾತ್ರವಲ್ಲದೆ ಕಾವೂರು, ಮುಚ್ಚೂರು ಹಾಗೂ ಗುರುಪುರದಲ್ಲಿ ಮೂರು ಐಸೋಲೇಶನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.
ಪ್ರತೀ ವಾರ್ಡ್, ಗ್ರಾಪಂ ವ್ಯಾಪ್ತಿಯಲ್ಲಿ ಟಾಸ್ಕ್‌ಫೋರ್ಸ್ ಮಾಡಲಿದ್ದು, ಸೋಂಕಿತರ ಪತ್ತೆ ಹಚ್ಚುವಿಕೆ,ನಿಗಾ ಮತ್ತಿತರ ಕೆಲಸವನ್ನು ಇದು ಮಾಡಲಿದೆ. ಜನತೆ ಭಯ ಬಿಟ್ಟು ಸೋಂಕಿನ ಪ್ರಸರಣವನ್ನು ತಡೆಯಲು ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್, ನಿರ್ಮಿತಿ ಕೇಂದ್ರದ ಹಿರಿಯ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಕಾರ್ಪೊರೇಟರ್ ವರುಣ್ ಚೌಟ, ಶ್ವೇತಾ, ಭರತ್‌ರಾಜ್ ಕೃಷ್ಣಾಪುರ, ವಿಠಲ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.