ಭಾರತದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸಿದ ಶ್ರೀಲಂಕಾ

Update: 2021-05-06 14:54 GMT
ಸಾಂದರ್ಭಿಕ ಚಿತ್ರ

ಕೊಲಂಬೊ (ಶ್ರೀಲಂಕಾ), ಮೇ 6: ಶ್ರೀಲಂಕಾವು ಭಾರತದಿಂದ ಬರುವ ಪ್ರಯಾಣಿಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರವು ಈ ಕ್ರಮ ತೆಗೆದುಕೊಂಡಿದೆ.

ಬ್ರಿಟನ್, ಆಸ್ಟ್ರೇಲಿಯ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳು ಭಾರತ ಹಾಗೂ ದಕ್ಷಿಣ ಏಶ್ಯದ ಇತರ ದೇಶಗಳಿಂದ ಬರುವ ಪ್ರಯಾಣಿಕರನ್ನು ಈಗಾಗಲೇ ನಿಷೇಧಿಸಿದೆ.

ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾದಲ್ಲಿ ಇಳಿಯಲು ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾದ ನಾಗರಿಕ ವಾಯುಯಾನ ಪ್ರಾಧಿಕಾರ ಗುರುವಾರ ತಿಳಿಸಿದೆ.

ಶ್ರೀಲಂಕಾದಲ್ಲೂ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಕಳೆದ ಹಲವಾರು ದಿನಗಳಲ್ಲಿ ಪ್ರತಿ ದಿನ ಸುಮಾರು 2,000 ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News