×
Ad

ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು: ಡಾ. ಸತೀಶ್ ರಾವ್

Update: 2021-05-06 21:46 IST

ಉಡುಪಿ, ಮೇ 6: ಮಾನನೀಯತೆಯ ಬಹು ಮುಖ್ಯ ಗುಣವಾದ ಅಮಾಯಕರಿಗೆ ಸಹಾಯ ಮಾಡುವ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ವ್ಯಕ್ತಿಗಿಂತ ವ್ಯಕ್ತಿತ್ವ ಬಲು ದೊಡ್ಡದು ಎಂದು ತಿಳಿದುಕೊಳ್ಳಬೇಕು ಎಂದು ಮಣಿಪಾಲ ಮಾಹೆಯ ರಿಸರ್ಚ್ ಡೈರೆಕ್ಟರ್ ಡಾ.ಸತೀಶ್ ರಾವ್ ಬಿ.ಎಸ್. ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿಯ ಸ್ಥಾನಿಕ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಯು. ಅರವಿಂದ ಕುಮಾರ್ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ರೇಡಿಯೇಶನ್ ಟೆಕ್ನೀಶಿಯನ್ ಆಗಿ 38 ವರ್ಷಗಳ ಸಾರ್ಥಕ ಕರ್ತವ್ಯದೊಂದಿಗೆ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಕುಂಜಿಬೆಟ್ಟಿನ ಶಾರದಾ ಮಂಟಪ ದಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸುವ ಸಮಾರಂಭದಲ್ಲಿ ಮಾತನಾಡುತಿದ್ದರು.

ಉಡುಪಿಯ ಖ್ಯಾತ ಸರ್ಜನ್ ಡಾ.ವೈ.ಸುದರ್ಶನ್ ರಾವ್, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಸಿ.ಎಸ್.ರಾವ್, ಖ್ಯಾತ ಲೆಕ್ಕ ಪರಿಶೋಧಕ ಗಣೇಶ್ ಹೆಬ್ಬಾರ್, ನಿವೃತ್ತ ಪ್ರಾಧ್ಯಾಪಕ ವೈ. ಭುವನೇಂದ್ರ ರಾವ್, ಬಿಎಸ್ಸೆಎನ್ನೆಲ್‌ನ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ ಬ್ರಹ್ಮಾವರ ಇವರು ಅರವಿಂದ ಕುಮಾರ್‌ರನ್ನು ಅಭಿನಂದಿಸಿ ಮಾತನಾಡಿದರು.

ಯು.ಅರವಿಂದ ಕುಮಾರ್‌ರನ್ನು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ಹಾಗೂ ಅಭಿನಂದನಾ ಪತ್ರದೊಂದಿಗೆ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಸಭಾಧ್ಯಕ್ಷತೆ ವಹಿಸಿದ್ದು ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.  ಕೃಷ್ಣಮೂರ್ತಿ ಬ್ರಹ್ಮಾವರ ಅಭಿನಂದನಾ ಪತ್ರ ವಾಚಿಸಿದರು. ಪ್ರಭಾರ ಕಾರ್ಯದರ್ಶಿ ಪ್ರಭಾಕರ ಭಂಡಿ ವಂದಿಸಿ ನಿರ್ದೇಶಕ ಕೃಷ್ಣಕುಮಾರ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News