ಭಾರತೀಯ ವೈದ್ಯ ಸಿಬ್ಬಂದಿಯ ದಣಿವರಿಯದ ಕೆಲಸವನ್ನು ಶ್ಲಾಘಿಸಿದ ಪೋಪ್

Update: 2021-05-06 17:25 GMT
photo: twitter(@Pontifex)

ವ್ಯಾಟಿಕನ್ ಸಿಟಿ, ಮೇ 6: ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿ ಮಾಡುತ್ತಿರುವ ದಣಿವಿಲ್ಲದ ಕೆಲಸವನ್ನು ಪೋಪ್ ಫ್ರಾನ್ಸಿಸ್ ಗುರುವಾರ ಶ್ಲಾಘಿಸಿದ್ದಾರೆ ಹಾಗೂ ಸದೃಢರಾಗಿ ಇರುವಂತೆ ಅವರನ್ನು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿ ಆಗಿರುವ ಭಾರೀ ಏರಿಕೆಯ ಹಿನ್ನೆಲೆಯಲ್ಲಿ, ಭಾರತದ ಕ್ಯಾಥೊಲಿಕ್ ಬಿಶಪ್ಸ್ ಕಾನ್ಫರೆನ್ಸ್‌ಗೆ ಅವರು ಈ ಸಂದೇಶ ನೀಡಿದ್ದಾರೆ. ಭಾರತದ ಜನತೆಗೆ ಅವರು ಹೃದಯ ತುಂಬಿದ ಬೆಂಬಲವನ್ನು ನೀಡಿದ್ದಾರೆ.

ನಾನು ಯಾವುದಕ್ಕಿಂತಲೂ ಹೆಚ್ಚು ರೋಗಿಗಳು ಮತ್ತು ಅವರ ಕುಟುಂಬಗಳು, ಅವರ ಆರೈಕೆ ಮಾಡುವವರು, ಅದರಲ್ಲೂ ಮುಖ್ಯವಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿರುವವರ ಬಗ್ಗೆ ಯೋಚಿಸುತ್ತೇನೆ ಎಂದರು.

ವೈದ್ಯರು, ನರ್ಸ್‌ಗಳು, ಆಸ್ಪತ್ರೆ ಕೆಲಸಗಾರರು, ಅ್ಯಂಬುಲೆನ್ಸ್ ಚಾಲಕರು ಮತ್ತು ಜನರ ತುರ್ತು ಅವಶ್ಯಕತೆಗಳಿಗೆ ದಣಿವರಿಯದೆ ಸ್ಪಂದಿಸುವ ಎಲ್ಲರ ಬಗ್ಗೆಯೂ ನಾನು ಯೋಚಿಸುತ್ತೇನೆ ಎಂದು ಪೋಪ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News