ಐಪಿಎಲ್‌ನ ಆಸ್ಟ್ರೇಲಿಯದ ಆಟಗಾರರು ಮಾಲ್ಡೀವ್ಸ್ ಗೆ

Update: 2021-05-07 04:12 GMT

ಹೊಸದಿಲ್ಲಿ: ಐಪಿಎಲ್‌ನ ವಿವಿಧ ತಂಡಗಳಲ್ಲಿರುವ ಆಸ್ಟ್ರೇಲಿಯದ ಆಟಗಾರರನ್ನು ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ.

   ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್‌ಗಳಾದ ಮೈಕೆಲ್ ಹಸ್ಸಿ ಮತ್ತು ಎಲ್. ಬಾಲಾಜಿ ಅವರನ್ನು ಹೊಸದಿಲ್ಲಿಯಿಂದ ಏರ್ ಆಂಬ್ಯುಲೆನ್ಸ್‌ನಲ್ಲಿ ಚೆನ್ನೈಗೆ ಕರೆ ತರಲು ನಿರ್ಧರಿಸಲಾಗಿದೆ. ಹಸ್ಸಿ ಮತ್ತು ಬಾಲಾಜಿ ಅವರಿಗೆ ಕೋವಿಡ್ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಎಸ್‌ಕೆ ಫ್ರಾಂಚೈಸ್ ವತಿಯಿಂದ ಚಿಕಿತ್ಸೆ ಮುಂದುವರಿದಿದೆ.

   ‘‘ನಾವು ಹಸ್ಸಿ ಮತ್ತು ಬಾಲಾಜಿಯನ್ನು ಏರ್ ಆ್ಯಂಬುಲೆನ್ಸ್ ಮೂಲಕ ಚೆನ್ನೈಗೆ ಕರೆತರಲು ನಿರ್ಧರಿಸಿದ್ದೇವೆ. ಅವರಿಗೆ ಚೆನ್ನೈನಲ್ಲಿ ಅಗತ್ಯದ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

  ಹಸ್ಸಿ ಭಾರತದಿಂದ ತೆರಳಲು ಕೋವಿಡ್-19 ನೆಗೆಟಿವ್ ವರದಿಗಾಗಿ ಕಾಯಬೇಕಾಗುತ್ತದೆ ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಐಪಿಎಲ್‌ನಲ್ಲಿ ಭಾಗವಹಿಸಿರುವ ಆಸ್ಟ್ರೇಲಿಯದ ಇತರ ಆಟಗಾರರು ಮಾಲ್ಡೀವ್ಸ್‌ಗೆ ವಿಮಾನದಲ್ಲಿ ತೆರಳಿದ್ದಾರೆ. ಅವರು ಆಸ್ಟ್ರೇಲಿಯಕ್ಕೆ ವಿಮಾನ ಹತ್ತುವ ಮುನ್ನ ಕಾಯುವ ಅವಧಿಯನ್ನು ಮಾಲ್ಡೀವ್ಸ್‌ನಲ್ಲಿ ಕಳೆಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ತಿಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಅನಿರ್ದಿಷ್ಟವಾಗಿ ಮುಂದೂಡಿದ ಬಳಿಕ ಆಸ್ಟ್ರೇಲಿಯನ್ನರನ್ನು ಭಾರತದಿಂದ ಮಾಲ್ಡೀವ್ಸ್‌ಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಸಿಎ ಮತ್ತು ಎಸಿಎ ಕೃತಜ್ಞತೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News