ಮಲೇಶ್ಯ ಓಪನ್‌ನಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ತಂಡ

Update: 2021-05-07 04:28 GMT

ಹೊಸದಿಲ್ಲಿ: ಭಾರತದ ಪ್ರಯಾಣಿಕರ ಮೇಲೆ ಮಲೇಶ್ಯ ಸರಕಾರ ವಿಧಿಸಿರುವ ತಾತ್ಕಾಲಿಕ ಪ್ರಯಾಣ ನಿರ್ಬಂಧದಿಂದಾಗಿ ಮೇ 25ರಿಂದ 30ರವರೆಗೆ ನಿಗದಿಯಾಗಿದ್ದ ಮಲೇಶ್ಯ ಓಪನ್‌ನಿಂದ ಭಾರತದ ಬ್ಯಾಡ್ಮಿಂಟನ್ ತಂಡ ಹಿಂದೆ ಸರಿದಿದೆ.

 ಪ್ರಯಾಣ ನಿಷೇಧವು 2021ರ ಎಪ್ರಿಲ್ 28ರಿಂದ ಜಾರಿಗೆ ಬಂದಿತು. ಒಲಿಂಪಿಕ್‌ಗೆ ಅರ್ಹತೆಯ ಅವಧಿ ಜೂನ್ 15ರಂದು ಕೊನೆಗೊಳ್ಳುತ್ತದೆ. ಇದು ಆಟಗಾರರಿಗೆ ಒಲಿಂಪಿಕ್ ಅರ್ಹತೆಗೆ ಪಡೆಯುವ ಕೊನೆಯ ಪಂದ್ಯಾವಳಿ ಆಗಿದೆ. ಭಾರತದ ಅಗ್ರ ಸಿಂಗಲ್ಸ್ ಮತ್ತು ಡಬಲ್ಸ್ ಆಟಗಾರರಾದ ಪಿ.ವಿ ಸಿಂಧು, ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಇದರಲ್ಲಿ ಭಾಗವಹಿಸಬೇಕಿತ್ತು.

 ಕ್ರೀಡಾ ಸಚಿವಾಲಯವು ವಿದೇಶಾಂಗ ಸಚಿವಾಲಯದ ಮೂಲಕ ಮಲೇಶ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಭಾರತದ ತಂಡಕ್ಕೆ ಭಾಗವಹಿಸಲು ಅನುಮತಿ ನೀಡುವಂತೆ ಕೋರಿತ್ತು. ಆದರೆ ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಲೇಶ್ಯ ಸರಕಾರ ಭಾರತದ ತಂಡದ ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರಿಂದಾಗಿ ಭಾರತ ತಂಡ ಅಲ್ಲಿಗೆ ಹೋಗಲು ಬೇರೆ ದಾರಿ ಇಲ್ಲದೆ ಟೂರ್ನಮೆಂಟ್‌ನಿಂದ ಹಿಂದೆ ಸರಿಯುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News