ಪಡುಬಿದ್ರೆಯ ವ್ಯಕ್ತಿ ​ಮಸ್ಕತ್ ನಲ್ಲಿ ನಿಧನ

Update: 2021-05-07 11:39 GMT

ಮಸ್ಕತ್ : ಇಲ್ಲಿನ ಅಲ್ ಖೂದ್ ನಗರದಲ್ಲಿ ಅಂಗಡಿ ಮಳಿಗೆ ನಡೆಸುತ್ತಿದ್ದ ಹಿದಾಯತುಲ್ಲಾ ಪಡುಬಿದ್ರೆ (48) ಎಂಬವರು ಉಸಿರಾಟದ ತೊಂದರೆ ಕಾಣಿಸಿಕೊಂಡು ಮಸ್ಕತ್ ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಸ್ಕತ್ ನ ಅಲ್ ಖೂದ್ ನಗರದಲ್ಲಿ ನೆಲೆಸಿದ್ದರು.

ಮೇ 3ರಂದು ತಡರಾತ್ರಿ ಹಿದಾಯತ್ ಅವರು ನಿಧನರಾಗಿದ್ದು, ಒಮಾನ್ ಕಾನೂನು ನಿಯಮಾವಳಿ ಪ್ರಕಾರ ಎಲ್ಲ ದಾಖಲೆ ಪತ್ರಗಳನ್ನು ಒದಗಿಸಿದ ಬಳಿಕ ಮೇ 5ರಂದು ಸಂಜೆ 4ರ ವೇಳೆಗೆ ಅಮರಾತ್ ಎಂಬಲ್ಲಿನ ದಫನ ಭೂಮಿಯಲ್ಲಿ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು.

ದಾಖಲೆ ಪತ್ರದ ಸಿದ್ಧಪಡಿಸುವಿಕೆಯಲ್ಲಿ ಸೋಶಿಯಲ್ ಫೋರಮ್ ಒಮನ್ ತಂಡವು ಸಹಕರಿಸಿತ್ತು. ಅಂತಿಮ ವಿಧಿವಿಧಾನದಲ್ಲಿ ಸೋಶಿಯಲ್ ಫೋರಮ್ ಒಮನ್ ಇದರ ಸದಸ್ಯರಾದ ತಬ್ರೇಝ್ ಪಡುಬಿದ್ರೆ, ನೂರ್ ಮುಹಮ್ಮದ್, ಮುಹಿಯುದ್ದೀನ್ ಹಾಗೂ ಅಬ್ದುಲ್ ರಹೀಮ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News