ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮನೆ ನಿರ್ಮಾಣ ನಿಲ್ಲಿಸಿ: ಇಸ್ರೇಲ್ ಗೆ ಯುರೋಪ್ ದೇಶಗಳ ಒತ್ತಾಯ

Update: 2021-05-07 16:43 GMT

ಬ್ರಸೆಲ್ಸ್ (ಬೆಲ್ಜಿಯಮ್), ಮೇ 7: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮನೆಗಳನ್ನು ನಿರ್ಮಿಸುವುದನ್ನು ನಿಲ್ಲಿಸುವಂತೆ ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಮತ್ತು ಬ್ರಿಟನ್ ದೇಶಗಳು ಇಸ್ರೇಲನ್ನು ಒತ್ತಾಯಿಸಿವೆ.

ಇಸ್ರೇಲಿಗರ ಕಾಲನಿ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನ್ಯಾಯಾಲಯವೊಂದರಲ್ಲಿ ನಡೆಯುವುದಕ್ಕೆ ಪೂರ್ವಭಾವಿಯಾಗಿ ಆಕ್ರಮಿತ ಪೂರ್ವಜೆರುಸಲೇಮ್ನಲ್ಲಿ ಉದ್ವಿಗ್ನತೆ ನೆಲೆಸಿರುವಂತೆಯೇ ಈ ದೇಶಗಳು ಗುರುವಾರಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿವೆ.

ಪೂರ್ವ ಜೆರುಸಲೇಮ್ ನ ಶೇಖ್ಜರಾಹ್ ಪಟ್ಟಣದಲ್ಲಿ ಇಸ್ರೇಲಿ ನ್ಯಾಯಾಲಯವೊಂದರ ಬೆಂಬಲದೊಂದಿಗೆ ಯಹೂದಿಗಳು ಕೆಲವು ಮನೆಗಳಲ್ಲಿ ವಾಸ ಆರಂಭಿಸಿದ್ದಾರೆ. ಇದೇ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದ್ದು, ಆ ಪಟ್ಟಣದ ಫೆಲೆಸ್ತೀನಿ ಕುಟುಂಬಗಳು ಮನೆಗಳಿಂದ ಹೊರದಬ್ಬಲ್ಪಡುವ ಬೆದರಿಕೆಯನ್ನು ಎದುರಿಸುತ್ತಿವೆ.

‘‘ಆಕ್ರಮಿತ ಪಶ್ಚಿಮ ದಂಡೆಯಹರ್ ಹೋಮ ಪ್ರದೇಶದಲ್ಲಿ 540 ಮನೆಗಳನ್ನು ನಿರ್ಮಿಸಲು ನಡೆಸಲಾಗುತ್ತಿರುವ ಕಾಮಗಾರಿಯನ್ನು ಮುಂದುವರಿಸಲುತೆಗೆದುಕೊಂಡಿರುವ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ನಾವು ಇಸ್ರೇಲ್ ಸರಕಾರವನ್ನು ಒತ್ತಾಯಿಸುತ್ತೇವೆ ಹಾಗೂ ಆಕ್ರಮಿತ ಫೆಲೆಸ್ತೀನ್ ಭೂಭಾಗಗಳಲ್ಲಿನ ಇಸ್ರೇಲಿ ವಸಾಹತುಗಳನ್ನು ವಿಸ್ತರಿಸುವ ನೀತಿಯನ್ನು ನಿಲ್ಲಿಸುವಂತೆಯೂ ನಾವು ಒತ್ತಾಯಿಸುತ್ತೇವೆ’’ ಎಂದು ಯುರೋಪ್ ದೇಶಗಳು ಹೇಳಿವೆ.

‘‘ಪೂರ್ವಜೆರುಸಲೇಮ್ ಮತ್ತು ಬೆತ್ಲೆಹೇಮ್ಗಳ ನಡುವೆ ಇರುವ ಹರ್ ಹೋಮ ಪ್ರದೇಶದಲ್ಲಿರುವ ಇಸ್ರೇಲಿ ಮನೆಗಳ ವಸಾಹತನ್ನು ವಿಸ್ತರಿಸುವ ನಿರ್ಧಾರಜಾರಿಗೊಂಡರೆ, ಪರಿಪೂರ್ಣ ಫೆಲೆಸ್ತೀನ್ ದೇಶವೊಂದರ ಸಾಧ್ಯತೆಗಳಿಗೆ ಇನ್ನಷ್ಟು ಹಾನಿಯಾಗುತ್ತದೆ’’ ಎಂದು ಈ ದೇಶಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News