×
Ad

ಮಂಗಳೂರು: ಕ್ರೆಡೈ ಕೋವಿಡ್ ಸಹಾಯ ಕೇಂದ್ರ ಆರಂಭ

Update: 2021-05-07 22:22 IST

ಮಂಗಳೂರು: ಕ್ರೆಡೈ ಮಂಗಳೂರು ವತಿಯಿಂದ ಕೊರೋನ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೋವಿಡ್ ಸಹಾಯ ಕೇಂದ್ರವನ್ನು ಆರಂಭಿಸಲಾಗಿದೆ.

ಮಂಗಳೂರಿನ ಬಿಜೈ ಕಾಪಿಕಾಡ್ ಮುಖ್ಯರಸ್ತೆಯ ನ್ಯೂಬೇರಿ ಎನ್‌ಕ್ಲೇವ್‌ನಲ್ಲಿ ಸಹಾಯ ಕೇಂದ್ರ ಕಾರ್ಯಾಚರಿಸಲಿದೆ.

ಸಹಾಯ ಕೇಂದ್ರಕ್ಕೆ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಚಾಲನೆ ನೀಡಿದರು. ಕೊರೋನ ಸೋಂಕು ಕಾಲದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ ಅವಶ್ಯ ನೆರವು ನೀಡಬೇಕಾಗಿದೆ. ಈ ದಿಶೆಯಲ್ಲಿ ಕ್ರೆಡೈ ಮಂಗಳೂರು ಸಹಾಯವಾಣಿ ಕೇಂದ್ರ ಆರಂಭಿಸಿರುವುದು ಉತ್ತಮ ಕಾರ್ಯ ಎಂದು ಅವರು ಹೇಳಿದರು. 

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಾಜಿ ಕಾರ್ಪೊರೇಟರ್ ವಿಜಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಕೈಡೈ ಅಧ್ಯಕ್ಷ ಪುಷ್ಪರಾಜ ಜೈನ್, ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರುಮೂರ್ತಿ, ವಿನೋದ್ ಪಿಂಟೋ, ಜಿತೇಂದ್ರ ಕೊಟ್ಟಾರಿ, ಲೋಕನಾಥ ಶೆಟ್ಟಿ, ಕಿರಣ್ ಶೆಟ್ಟಿ, ಗಣೇಶ್ ಎಂ.ಪಿ., ಸಂಪತ್ ಶೆಟ್ಟಿ, ಜಗದೀಶ ಅಧಿಕಾರಿ, ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಹಾಯವಾಣಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದ ಪುಷ್ಪರಾಜ ಜೈನ್ ಅವರು, ಕ್ರೆಡೈ ಮಂಗಳೂರು ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು, ಅನೇಕ ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜದಲ್ಲಿರುವ ಅಸಹಾಯಕರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಾ ಬಂದಿದೆ. ಪ್ರಸ್ತುತ ಕೊರೋನ ಸಂಕಷ್ಟ ಕಾಲದಲ್ಲಿ ಸ್ಪಂದಿಸುವುದು ಪ್ರತಿಯೋರ್ವರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಕ್ರೆಡೈ ಮಂಗಳೂರು ತನ್ನ ಸದಸ್ಯರೆಲ್ಲರ ಸಹಕಾರದೊಂದಿಗೆ ಕೋವಿಡ್ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದೆ. ಇದಲ್ಲದೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಒದಗಿಸುವ ಯೋಜನೆ ಇದೆ ಎಂದರು.

ಸಹಾಯಕೇಂದ್ರ

ಕೊರೋನ ಸೋಂಕಿತರು ಹಾಗೂ ಅವರ ಸೇವೆಯಲ್ಲಿರುವರಿಗೆ ಅವಶ್ಯಕತೆಗಳಿಗೆ ಸ್ಪಂದಿಸಲಿದೆ. ಅಂಬುಲೆನ್ಸ್, ಪಿಪಿಇ ಕಿಟ್, ಜಿಲ್ಲೆಯಲ್ಲಿ ಶವಸಂಸ್ಕಾರಕ್ಕೆ ಧನ ಸಹಾಯ ಮಾಡಲಿದೆ. ಮಾತ್ರವಲ್ಲದೆ ಶವಸಂಸ್ಕಾರ ಮಾಡುವವರಿಗೆ ವಿಮಾ ಸೌಲಭ್ಯವನ್ನು ಒದಗಿಸಲಿದೆ. ಅವಶ್ಯಕತೆ ಇರುವವರು ನಮ್ಮ ಸಹಾಯ ಕೇಂದ್ರಕ್ಕೆ ಕರೆ ಮಾಡಿದರೆ ಕೂಡಲೇ ಅವಶ್ಯ ವ್ಯವಸ್ಥೆಗಳನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದು ಪುಷ್ಪರಾಜ ಜೈನ್ ಅವರು ತಿಳಿಸಿದ್ದಾರೆ.

ಐದು ಅಂಬುಲೆನ್ಸ್ ವ್ಯವಸ್ಥೆ

ಕ್ರೆಡೈ ವತಿಯಿಂದ ಐದು ಅಂಬುಲೆನ್ಸ್‌ಗಳನ್ನು ವ್ಯವಸ್ಧೆಗೊಳಿಸಲಾಗಿದೆ. ಅವಶ್ಯವಿರುವವರು ಕ್ರೆಡೈ ಸಹಾಯ ಕೇಂದ್ರದ ದೂರವಾಣಿಗೆ ಕರೆ ಮಾಡಿದರೆ ಕೂಡಲೇ ಅಂಬುಲೆನ್ಸ್ ಸೇವೆ ಲಭ್ಯವಾಗಲಿದೆ ಎಂದು ಪುಷ್ಪರಾಜ್ ಜೈನ್ ವಿವರಿಸಿದರು. ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ಕೋವಿಡ್ ಸಹಾಯಕೇಂದ್ರ : ಸಂಪರ್ಕ ಮೊಬೈಲ್ ನಂಬರ್‌ಗಳು
*9620432499
*9880137911
*9880099911
*9845083418
*ಅಂಬುಲೆನ್ಸ್‌ಗಾಗಿ -8884455043
*ಪಿಪಿಇ ಕಿಟ್-9880137925,
*ಶವಸಂಸ್ಕಾರಕ್ಕೆ ಧನ ಸಹಾಯ- 7676767101
* ವಿಮಾ ಯೋಜನೆ-9880137911 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News