ಡಬಲ್ ಒಲಿಂಪಿಯನ್, ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ ಕೋವಿಡ್ ಗೆ ಬಲಿ

Update: 2021-05-08 06:17 GMT
ರವೀಂದರ್ ಪಾಲ್ ಸಿಂಗ್ (Photo: Twitter/@KirenRijiju)

ಹೊಸದಿಲ್ಲಿ: ಭಾರತದ ಮಾಜಿ ಹಾಕಿ ಆಟಗಾರ ಹಾಗೂ 1980 ರ ಮಾಸ್ಕೋ ಒಲಿಂಪಿಕ್ಸ್ ಪದಕ ವಿಜೇತ ತಂಡದ ಸದಸ್ಯ ರವೀಂದರ್ ಪಾಲ್ ಸಿಂಗ್ ಅವರು ಲಕ್ನೋದಲ್ಲಿ ಶನಿವಾರ ಬೆಳಿಗ್ಗೆ ಕೋವಿಡ್ -19 ರೊಂದಿಗೆ ಸುಮಾರು ಎರಡು ವಾರಗಳ ಕಾಲ ಹೋರಾಡಿ ನಿಧನರಾದರು. ಅವರಿಗೆ  60 ವರ್ಷ ವಯಸ್ಸಾಗಿತ್ತು.

ಮಾರಣಾಂತಿಕ ವೈರಸ್ ಪತ್ತೆಯಾದ  ನಂತರ ಸಿಂಗ್ ಅವರನ್ನು ಎಪ್ರಿಲ್ 24 ರಂದು ವಿವೇಕಾನಂದ ಆಸ್ಪತ್ರೆಯಲ್ಲಿ  ದಾಖಲಿಸಲಾಯಿತು.

ಕುಟುಂಬದ ಮೂಲಗಳ ಪ್ರಕಾರ, ಸಿಂಗ್ ವೈರಸ್‌ನಿಂದ ಚೇತರಿಸಿಕೊಂಡಿದ್ದು, ಪರೀಕ್ಷೆಯ ನಂತರ ಗುರುವಾರ ಅವರನ್ನು ಕೋವಿಡ್ ಅಲ್ಲದ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಶುಕ್ರವಾರ ಅವರ ಸ್ಥಿತಿ ಹಠಾತ್ತನೆ ಹದಗೆಟ್ಟಿತು ಹಾಗೂ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಆಡಿದ್ದ ಸಿಂಗ್ ಅವಿವಾಹಿತರಾಗಿದ್ದು, ಸೋದರ ಸೊಸೆ, ಪ್ರಜ್ಞಾ ಯಾದವರನ್ನು ಅಗಲಿದ್ದಾರೆ.  ಸಿಂಗ್ ಅವರು 1979 ರ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು ಹಾಗೂ  ಹಾಕಿಯಿಂದ ನಿವೃತ್ತಿಯಾದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರಿಯಿಂದಲೂ ಸ್ವಯಂಪ್ರೇರಿತರಾಗಿ ನಿವೃತ್ತರಾದರು.

ಸೀತಾಪುರದಲ್ಲಿ ಜನಿಸಿದ ಸಿಂಗ್ ಅವರು ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (1980, 1983 ) ಹಾಂಕಾಂಗ್‌ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಹಾಗೂ  ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಇತರ ಪಂದ್ಯಾವಳಿಗಳಲ್ಲಿ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

1980, 1984ರ ಡಬಲ್ ಒಲಿಂಪಿಯನ್ ನಿಧನಕ್ಕೆ ಕ್ರೀಡಾ ಸಚಿವ ಕಿರಣ್  ರಿಜಿಜು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News