ಲಸಿಕೆಯ ಅಸಮಾನ ವಿತರಣೆ ಅಸ್ವೀಕಾರಾರ್ಹ: ಜಿ7 ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ

Update: 2021-05-08 16:33 GMT
photo:twitter(@WHO)

ಜಿನೀವ (ಸ್ವಿಟ್ಸರ್ಲ್ಯಾಂಡ್), ಮೇ 8: ಜಗತ್ತಿನಾದ್ಯಂತ ಕೋವಿಡ್-19 ಲಸಿಕೆಗಳು ಎಲ್ಲರಿಗೂ ಸಮಾನವಾಗಿ ಲಭಿಸುವಂತೆ ನೋಡಿಕೊಳ್ಳಿ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಶುಕ್ರವಾರ ಜಿ7 ದೇಶಗಳಿಗೆ ಮನವಿ ಮಾಡಿದ್ದಾರೆ. 

ಈಗ ಇರುವ ಅಸಮಾನತೆಯು ನೈತಿಕವಾಗಿ ಅಸ್ವೀಕಾರಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ಶ್ರೀಮಂತ ಮತ್ತು ಬಡ ದೇಶಗಳಲ್ಲಿ ಕೊರೋನ ವೈರಸ್ ಲಸಿಕೆಯ ಅಸಮಾನ ವಿತರಣೆಯು ಕೊರೋನ ವೈರಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ಪೂರಕವಾಗಿಲ್ಲ ಎಂದು ಅವರು ಹೇಳಿದ್ದಾರೆ.

‘‘ನಾವು ತಕ್ಷಣಕ್ಕೆ ಜಿ7 ದೇಶಗಳಿಂದ ನಿರೀಕ್ಷಿಸುವ ಮಹತ್ವದ ಸಹಾಯವೆಂದರೆ, ಲಸಿಕೆಗಳು ಮತ್ತು ಲಸಿಕೆಗಳ ಸಮಾನ ವಿತರಣೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News