ಮೇ 9ರಿಂದ ಲಸಿಕ ಶಿಬಿರ ಇಲ್ಲ: ದ.ಕ. ಜಿಲ್ಲಾ ಡಿಎಚ್‌ಒ

Update: 2021-05-08 17:03 GMT

ಮಂಗಳೂರು, ಮೇ 8: ದ.ಕ. ಜಿಲ್ಲೆಗೆ ಪೂರೈಕೆಯಾದ ಎಲ್ಲಾ ಕೋವಿಡ್ ಲಸಿಕೆಯನ್ನು ಶನಿವಾರ ಫಲಾನುಭವಿಗಳಿಗೆ ನೀಡಲಾಗಿದೆ. ಸದ್ಯ ಲಸಿಕೆ ಖಾಲಿಯಾಗಿದ್ದು, ಮೇ 9ರಿಂದ ಮುಂದಿನ ಸೂಚನೆಯವರೆಗೆ ಯಾವುದೇ ಲಸಿಕ ಶಿಬಿರವು ಜಿಲ್ಲೆಯಲ್ಲಿ ನಡೆಯುವುದಿಲ್ಲ. ಲಸಿಕೆ ಪೂರೈಕೆಯಾದ ನಂತರ ದಿನಾಂಕವನ್ನು ನಿಗದಿಪಡಿಸಿ ಕೋವಿಡ್ ನಿರೋಧಕ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News