ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ : ಮನಪಾ ಆಯುಕ್ತರು

Update: 2021-05-08 17:04 GMT

ಮಂಗಳೂರು, ಮೇ 8: ಕೋವಿಡ್-ಲಾಕ್‌ಡೌನ್-ಕರ್ಫ್ಯೂವಿನಿಂದಾಗಿ ಅತಂತ್ರರಾಗಿರುವ ನಗರದ ವಲಸೆ ಕಾರ್ಮಿಕರ ಹಿತದೃಷ್ಟಿಯಿಂದ ದ.ಕ.ಜಿಲ್ಲಾಧಿಕಾರಿಯ ಸೂಚಿನೆಯಂತೆ ವಲಸೆ ಕಾರ್ಮಿಕರು ರಾತ್ರಿ ತಂಗುವುದಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಗರದ ಪುರಭವನದ ಮಿನಿ ಸಭಾಂಗಣ, ಬಂದರ್ ಮತ್ತು ಉರ್ವ ಮಾರ್ಕೆಟ್ ಬಳಿಯಲ್ಲಿರುವ ಡೇ ನಲ್ಮ್ (ರಾತ್ರಿ ವಸತಿ ರಹಿತರ ಆಶ್ರಯ ಕೇಂದ್ರ) ನಲ್ಲಿ ತಾತ್ಕಾಲಿಕವಾಗಿ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಆಹಾರ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಹಾಗಾಗಿ ಈ ಕೇಂದ್ರದಲ್ಲಿ ಆಶ್ರಯ ಪಡೆದುಕೊಳ್ಳುವವರಿಗೆ ಆಹಾರ ಮತ್ತಿತರ ನೆರವು ನೀಡಲು ಬಯಸುವ ದಾನಿಗಳು, ಸಂಘಟನೆಗಳು ಮನಪಾ ಸಮುದಾಯ ವ್ಯವಹಾರಗಳ ಅಧಿಕಾರಿ ಮಾಲಿನಿ ರಾಡ್ರಿಗಸ್ (ಮೊ.ಸಂ: 9880166355)ಅವರನ್ನು ಸಂಪರ್ಕಿಬಹುದು ಎಂದು ಮನವಿ ಮಾಡಿದ್ದಾರೆ.

...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News