ಸಂಸದ ತೇಜಸ್ವಿ ಸೂರ್ಯ ಜಾತಿ ಧರ್ಮದ ವೈಷಮ್ಯ ತೋರ್ಪಡಿಸುವುದು ಖಂಡನೀಯ: ರಮೀಝ್ ಹುಸೈನ್ ಆರೋಪ

Update: 2021-05-08 17:08 GMT
ರಮೀಝ್ ಹುಸೈನ್

ಪಡುಬಿದ್ರಿ : ಕೊರೋನ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅದನ್ನು ‌ಯಾವ‌ ರೀತಿ ಹತೋಟಿ ‌ತರಬೇಕೇಂಬ ಚಿಂತನೆಯನ್ನು ‌ರಾಜ್ಯ ಹಾಗು‌ ಕೇಂದ್ರ ‌ಸರಕಾರ ಮಾಡ ಬೇಕಾಗಿದೆ. ಇದರ ನಡುವೆ ಒಂದು ಧರ್ಮ ಹಾಗು ಜಾತಿ ಮೇಲೆ ಬೊಟ್ಟು ಮಾಡುವ ಕೆಲಸವನ್ನು ಸಂಸದ ತೇಜಸ್ವಿ ಸೂರ್ಯ ಮಾಡುತಿರುವುದು ಖಂಡನೀಯ ಎಂದು ಕಾಪು ಬ್ಲಾಕ್ ಯುವ‌ ಕಾಂಗ್ರೆಸ್ ಅಧ್ಯಕ್ಷ  ರಮೀಝ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ  ಆಕ್ಸಿಜನ್ ‌ಕೊರತೆಯಿಂದ 24 ಮಂದಿ ಸಾವುನಪ್ಪಿದ್ದರು ಇದು ಸರಕಾರ ಪ್ರಯೊಜಿತ ಕೊಲೆ ಇದನ್ನು ಮುಚ್ಚಿ ಹಾಕುವ‌ ಪ್ರಯತ್ನ ವನ್ನು ಸಂಸದ‌ ತೇಜಸ್ವಿ ಸೂರ್ಯ ಮಾಡುತಿದ್ದಾರೆ ಎಂದು ರಮೀಝ್ ಹುಸೈನ್ ಆರೋಪಿಸಿದರು.

ಬಿಬಿಎಂಪಿ ಕೋವಿಡ್ ವಾರ್ ರೂಮ್ ನಲ್ಲಿ  ಕೆಲಸ‌ ಮಾಡುವ 206 ಸಿಬ್ಬಂದಿಗಳಲ್ಲಿ ಕೇವಲ 16 ಸಿಬ್ಬಂದಿಗಳು ಒಂದೇ ಧರ್ಮ ದವರಿದ್ದರೆಂಬ ಕಾರಣಕ್ಕೆ ಅವರನ್ನು  ಎತ್ತಿ ಕಟ್ಟುವ‌ ಕೆಲಸವನ್ನು ಮಾಡವುದು  ಅವರ ಘನತೆಗೆ ಗೌರವ‌ತರುವ‌ ಕೆಲಸವಲ್ಲ , ಕೇಂದ್ರ ಹಾಗು ರಾಜ್ಯದಲ್ಲಿ ನಿಮ್ಮದೇ ಸರಕಾರ ಇರುವುದರಿಂದ ಕೋವೀಡ್ ಅನ್ನು ಹತೋಟಿ ತರಲು ಪ್ರಯತ್ನಿಸಿ. ಕೊರೋನ  ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರಕ್ಕೆ ಹಲವಾರು ಮುಸ್ಲಿಂ ರಾಷ್ಟ್ರಗಳು ನೆರವು ನೀಡಿರುವುದನ್ನು ಪ್ರಶಂಸಿಸುವುದು ಬಿಟ್ಟು ಒಂದು ಧರ್ಮವನ್ನು ಹೀಯಾಳಿಸುವುದು ಸರಿಯಲ್ಲ. ಬೆಡ್ ಬ್ಲಾಕ್ ದಂಧೆಯಲ್ಲಿ ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆಯಾಗಲೇ ಬೇಕು. ಇಂತಹ ಸಂದರ್ಭದಲ್ಲಿ ಜಾತಿ ಧರ್ಮದ ಬೇಧ ಭಾವ ಮಾಡದೇ ಮಾನವೀಯತೆ ತೋರಬೇಕಾಗಿದೆ  ಎಂದು ರಮೀಝ್ ಹುಸೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News