ಉ.ಕ.ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ-ಜಿಲ್ಲಾಧಿಕಾರಿ ಮುಗಿಲನ್

Update: 2021-05-08 17:14 GMT

ಭಟ್ಕಳ : ಸಧ್ಯಕ್ಕೆ ಉ.ಕ.ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಅವರು ಶನಿವಾರ ಭಟ್ಕಳ ಪ್ರವಾಸಿ ಬಂಗ್ಲೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ್ದು, ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಆಗದಂತೆ ತಡೆಯಲು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜಕನದ ಪ್ಲಾಂಟ್ ಮಾಡುತ್ತಿದ್ದೇವೆ. ಭಟ್ಕಳದಲ್ಲೂ ಪ್ಲಾಂಟ್ ಸಿದ್ದವಾಗುತ್ತಿದೆ. ಕೋವಿಡ್ ಎರಡನೇ ಅಲೆ ಅತೀಸೂಕ್ಷ್ಮವಾಗಿದ್ದು, ಈ ಬಗ್ಗೆ ಜನರು ಬೇಜವಾಬ್ದಾರಿತನ ತೋರಿದರೆ ತೊಂದರೆ ಎದುರಿಸಬೇಕಾದೀತು. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದಿದ್ದು ಕೋವಿಡ್ ನಿಯಮ ಪಾಲಿಸಬೇಕು ಎಂದ ಅವರು ಮೇ.10ರ ಲಾಕ್ ಡೌನ್ ತಯಾರಿ ಮತ್ತು ಆರೋಗ್ಯ ವ್ಯವಸ್ಥೆಯ ಸಿದ್ದತೆ ಕುರಿತು ಪರಿಶೀಲಿಸಿದ್ದೇನೆ. ಜನರು  ಅನಗತ್ಯ ತಿರುಗಾಡಬಾರದು. ಕೋವಿಡ್ ಸೋಂಕು ಹೆಚ್ಚಾದರೆ ಜನರಿಗೇ ಕಷ್ಟವಾಗುತ್ತದೆ. ಕೋವಿಡ್ ಮೊದಲ ಲಸಿಕೆ ಹಾಕಿಸಿಕೊಂಡವರಿಗೆ ಎರಡನೇ ಲಸಿಕೆಗೇನೂ ಸಮಸ್ಯೆ ಇಲ್ಲ. ಆದರೆ ಹೊಸದಾಗಿ ಲಸಿಕೆ ಹಾಕಲು ಸದ್ಯ ತೊಂದರೆ ಇದ್ದು, ಇದು ಸದ್ಯದಲ್ಲೇ ಬಗೆಹರಿಯಲಿದೆ. ಲಸಿಕೆ ಬಂದ ತಕ್ಷಣವೇ ಪತ್ರಕರ್ತರಿಗೆ ಮೊದಲು ಲಸಿಕೆ ವಿತರಿಸಲು ಆದ್ಯತೆ ನೀಡಲಾಗುವುದು. ಲಾಕಡೌನ್ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಿಸಿದವರನ್ನು ಅಂತರಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ಸಮಸ್ಯೆಯಾಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆದರೆ ಅಲ್ಲಿನ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇದೆಯೇ ಎನ್ನುವುದು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕೆಂದರು. ಎಸ್ಪಿ ಶಿವಪ್ರಕಾಶದೇವರಾಜು, ಎಸಿ ಮಮತಾದೇವಿ, ತಹಸೀಲ್ದಾರ ರವಿಚಂದ್ರ, ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News