ಕಂಚಿನಡ್ಕ ಯುವಕರಿಂದ ಹಸಿದವನಿಗೆ ಅನ್ನ: ಕಾಪು ಯೂತ್ ಕಾಂಗ್ರೆಸ್ ಪ್ರಾಯೋಜಕತ್ವ

Update: 2021-05-08 17:15 GMT

ಪಡುಬಿದ್ರಿ: ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಉಂಟಾದ ಲಾಕ್‍ಡೌನ್‍ನಿಂದ ಹಸಿವಿನಿಂದ ತತ್ತರಿಸಿದ ಜನರಿಗೆ ಪಡುಬಿದ್ರಿಯ ಕಂಚಿನಡ್ಕ ಪರಿಸರದ ಯುವಕರು ಹಸಿದವನಿಗೆ ಅನ್ನ ಎಂಬ ಕಾರ್ಯಕ್ರಮ 9 ದಿನಗಳಿಂದ ವಿವಿಧ ದಾನಿಗಳ ಸಹಕಾರದಿಂದ ನಡೆಸುತಿದ್ದಾರೆ. 

9ನೇ ದಿನದ ಪ್ರಾಯೋಜಕರಾಗಿ ಕಾಪು ಬ್ಲಾಕ್ ಯುವ ಕಾಂಗ್ರೆಸ್‍ನಿಂದ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರ್ಕಾರದ ಈ ಲಾಕ್‍ಡೌನ್‍ನಿಂದ ಹಲವು ಮಂದಿ ಹಸಿವಿನಿಂದ ಬಳಲುತಿದ್ದಾರೆ. ಇಂತಹ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡುವ ಮೂಲಕ ಮಾನವೀಯ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದರು.

ಸಮಾನ ಮನಸ್ಕರು ಸೇರಿ ಈ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ. ಪ್ರತಿ ನಿತ್ಯ ಹೆಜಮಾಡಿಯಿಂದ ಉಡುಪಿಯವರೆಗೆ ಬಿಕ್ಷುಕರಿಗೆ, ನಿರ್ಗತಿಕರಿಗೆ  ಸುಮಾರು 150ಕ್ಕೂ ಅಧಿಕ ಮಂದಿಗೆ ಅನ್ನ ಮತ್ತು ನೀರನ್ನು ವಿತರಿಸಲಾಗುತ್ತದೆ. ಎಲ್ಲರ ಸಹಕಾರವೂ ದೊರಕುತ್ತಿದೆ ಎಂದು ಸಂಘಟಕ ಎಂ.ಎಸ್. ನಿಝಾಮ್ ಹೇಳಿದರು.

ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಹರೀಶ್ ಶೆಟ್ಟಿ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಯೂತ್ ಕಾಂಗ್ರೆಸ್ ಕಾಪು ಬ್ಲಾಕ್ ಉಪಾಧ್ಯಕ್ಷ ದಿಲ್ದಾರ್ ಶೇಖ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಮುದರಂಗಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಕೋಟ್ಯಾನ್, ಎಂ.ಎಸ್. ಶಫಿ, ಜ್ಯೋತಿ ಮೆನನ್, ಯೂತ್ ಕಾಂಗ್ರೆಸ್‍ನ ದೀಪ್ತಿ, ಶಫೀಕ್ ಕಂಚಿನಡ್ಕ,  ಮುಝಮ್ಮಿಲ್, ವಿನೋದ್ ಮಾರ್ಟಿಸ್, ತೌಸೀಫ್, ಹಕೀಂ  ಉಪಸ್ಥಿತರಿದ್ದರು.

ಕಾಪು ಬ್ಲಾಕ್ (ದಕ್ಷಿಣ) ಅಧ್ಯಕ್ಷ ರಮೀಝ್ ಹುಸೈನ್ ಸ್ವಾಗತಿಸಿದರು. ಕೀರ್ತಿ ಕುಮಾರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News