​18 ವಯೋಮಾನವದವರಿಗೆ ಸಿಗದ ಲಸಿಕೆ: ಬ್ಲಾಕ್ ಕಾಂಗ್ರೆಸ್ ಟೀಕೆ

Update: 2021-05-08 17:19 GMT

ಉಡುಪಿ, ಮೇ 8: ಕೋವಿಡ್ ವಿರುದ್ಧ ನೀಡಲಾಗುವ ಲಸಿಕೆಯನ್ನು ಮೇ 1ರಿಂದ 18-45 ವಯೋಮಾನದವರಿಗೆ ನೀಡುವ ಘೋಷಣೆಯನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಟೀಕಿಸಿದೆ.

ಯಾವುದೇ ಪೂರ್ವ ತಯಾರಿ ಇಲ್ಲದೆ ಕೇವಲ ಪ್ರಚಾರಕ್ಕಾಗಿ 18ರಿಂದ 45ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುವುದು ಎಂದು ಸರಕಾರ ಘೋಷಿಸಿದ್ದು, ಸಾಂಕೇತಿಕವಾಗಿ ಒಂದು ದಿನ ಪ್ರಾರಂಭ ಮಾಡಿ ನಂತರ ನಿಲ್ಲಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಇಲಾಖೆಗಳು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ವ್ಯಾಕ್ಸಿನ್‌ಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲ ವಾಗಿವೆ ಎಂದು ಹೇಳಿಕೆಯಲ್ಲಿ ದೂರಲಾಗಿದೆ.

ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲಿನವರಿಗೆ ಒಂದನೇ ಡೋಸ್ ಪಡೆದು 6-8 ವಾರಗಳಾದರೂ ಎರಡನೇ ಡೋಸ್ ಲಸಿಕೆ ಸಿಗದೆ ಜನ ಪರದಾ ಡುವಂತಾಗಿದೆ. ಲಸಿಕೆ ಎಲ್ಲಿ, ಯಾವಾಗ ದೊರೆಯುತ್ತದೆ ಎಂದು ಮಾಹಿತಿ ಇಲ್ಲದೇ ಜನ ಆಸ್ಪತ್ರೆಗಳಿಗೆ ಸುತ್ತಾಡುವಂತಾಗಿದೆ ಎಂದು ಅದು ಆಕ್ರೋಶ ವ್ಯಕ್ತ ಪಡಿಸಿದೆ.

ಉಡುಪಿಯ ಶಾಸಕರು ಹಾಗೂ ಸಂಸದರು ತಮ್ಮದೇ ಪಕ್ಷದ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿ ಸಾಕಷ್ಟು ವ್ಯಾಕ್ಸಿನ್ ಉಡುಪಿಗೆ ಲಭಿಸುವಂತೆ ಮಾಡಲು ವಿಫಲರಾಗಿದ್ದಾರೆ. ಅಲ್ಲದೇ ವ್ಯಾಕ್ಸಿನ್‌ನ್ನು ಸರಕಾರಿ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲದೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ನೀಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಹಾಗೂ ಇತರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News