’ಪಿಲಿ ಕಿಟ್ಟಣ್ಣ’ ಖ್ಯಾತಿಯ ಎಂ.ಕೃಷ್ಣ ನಾಯ್ಕ ನಿಧನ

Update: 2021-05-08 17:20 GMT

ಬಂಟ್ವಾಳ, ಮೇ 8: ಮೂಲತಃ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡಿನಲ್ಲಿ ವಾಸವಿದ್ದ ಉಪ್ಪಿನಂಗಡಿ ಮಾವಿನಕಟ್ಟೆ ನಿವಾಸಿ 'ಪಿಲಿ ಕಿಟ್ಟಣ್ಣ' ಖ್ಯಾತಿಯ ಎಂ.ಕೃಷ್ಣ ನಾಯ್ಕ(75) ಅವರು ಶನಿವಾರ ಸ್ವಗೃಹದಲ್ಲಿ ನಿಧನರಾದರು. 

ಮೃತರು ಕಳೆದ 53 ವರ್ಷಗಳಿಂದ ದಸರಾ ಸಮಯದಲ್ಲಿ ಹುಲಿವೇಷ ಹಾಕಿ ವಿಟ್ಲ, ಪುತ್ತೂರು ಸುತ್ತಮುತ್ತ ನಾಗರಿಕರನ್ನು ರಂಜಿಸುತ್ತಿದ್ದರು. ತನ್ನದೇ ಆದ ಹುಲಿ ತಂಡದ ಮೂಲಕ ವಿಶಿಷ್ಟ ಶೈಲಿಯ ನರ್ತನದ ಮೂಲಕ ಮನೆಮಾತಾಗಿದ್ದರು. 

ಅವರು ಹುಲಿ ವೇಷದಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅವರು, ವಿಟ್ಲ ದೇವತಾ ಸಮಿತಿಯ ಶಾರದೋತ್ಸವದ ಪ್ರತೀ ವರ್ಷದ ಪ್ರಾರಂಭದ ಮೆರವಣಿಗೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ತನ್ನ ತಂಡದೊಂದಿಗೆ ಭಾಗವಹಿಸುತ್ತಿದ್ದರು. 

ಹುಲಿವೇಷ ನರ್ತಕರಾಗಿ ಹೆಸರುವಾಸಿಯಾಗಿದ್ದ ಎಂ.ಕೃಷ್ಣ ನಾಯ್ಕ ಅವರು ವಿಟ್ಲ, ಪುತ್ತೂರು ಜನತೆಗೆ ಪ್ರೀತಿಯ 'ಪಿಲಿ ಕಿಟ್ಟಣ್ಣ' ಎಂದೇ ಖ್ಯಾತರಾಗಿದ್ದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News