ಲಸಿಕೆ ನೀಡದಿರುವುದು ಕೇಂದ್ರ ಸರಕಾರದ ವೈಫಲ್ಯ: ಖಾದರ್

Update: 2021-05-08 17:23 GMT

ಮಂಗಳೂರು, ಮೇ‌. 8: ಜನತೆಗೆ ಬೇಕಾಗುವಷ್ಟು ಲಸಿಕೆ ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದೆ. ಆದರೆ ಕೇಂದ್ರವು ಲಸಿಕೆ ತಯಾರಿ ಅಥವಾ ಪೂರೈಕೆ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ತಯಾರಿಸುವವರು ಒತ್ತಡ ತಡೆಯಲಾರದೆ ದೇಶ ಬಿಟ್ಟು ಹೋಗಿದ್ದಾರೆ. ಕಳೆದ ಬಾರಿ ಪ್ರತಿ ದಿನ 300 ಸೋಂಕಿನ ಪ್ರಕರಣ ಪತ್ತೆಯಾಗಿತ್ತು. 3 ತಿಂಗಳು ಲಾಕ್‌ಡೌನ್ ಮಾಡಿದರೂ ಕೊರೋನ ಕಡಿಮೆಯಾಗಿಲ್ಲ. ಈಗ 3 ಲಕ್ಷ ಪ್ರಕರಣ ಪತ್ತೆಯಾಗುತ್ತಿದೆ. ಇದಕ್ಕೆ ಲಾಕ್‌ಡೌನ್ ಪರಿಹಾರ ಅಲ್ಲ. ದಿನಕ್ಕೆ ರಾಜ್ಯದಲ್ಲಿ 50 ಸಾವಿರ ಕೇಸ್ ಪತ್ತೆಯಾಗುತ್ತಿದೆ.  ಮೆಡಿಕಲ್ ತಜ್ಞರ ಪ್ರಕಾರ ದಿನಕ್ಕೆ 8 ಸಾವಿರ ಜನರಿಗೆ 2.40 ಲಕ್ಷ ಬೆಡ್, 50 ಸಾವಿರ ಆಕ್ಸಿಜನ್ ಬೇಕಾಗುತ್ತದೆ. ಆಸ್ಪತ್ರೆ, ಆರೋಗ್ಯ ಕೇಂದ್ರದಲ್ಲಿ  ಲಸಿಕೆ ಶಿಬಿರ ಮಾಡುವ ಬದಲು ಮನೆ ಮನೆಗೆ ತೆರಳಿ ಲಸಿಕರ ನೀಡಲು ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News