ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ: 242 ವಾಹನಗಳು ವಶ

Update: 2021-05-08 17:24 GMT

ಮಂಗಳೂರು, ಮೇ 8: ಜಿಲ್ಲೆಯಲ್ಲಿ‌ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಶನಿವಾರ 12 ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ 242 ವಾಹನ ವಶ ಪಡಿಸಲಾಗಿದೆ‌. 567 ಮಂದಿಯ ವಿರುದ್ಧ ಮಾಸ್ಕ್‌ ಉಲ್ಲಂಘನೆ ಕೇಸು ದಾಖಲಿಸಲಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 206 ವಾಹನ ವಶ, 6 ಕೇಸ್, 325 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಜಿಲ್ಲಾ ಗ್ರಾಮಾಂತ ರದಲ್ಲಿ 6 ಕೇಸ್, 242 ಮಾಸ್ಕ್‌ ಉಲ್ಲಂಘನೆ ಪ್ರಕರಣ ಹಾಗೂ 36 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News