×
Ad

ಕೊರೋನ ಸೋಂಕು ಸೋಲಿಸಲು ತಪ್ಪದೆ ಲಸಿಕೆ ಹಾಕಿಸಿ: ಉಡುಪಿ ಬಿಷಪ್

Update: 2021-05-09 18:46 IST

ಉಡುಪಿ, ಮೇ 9: ಕೋವಿಡ್-19 ಸೋಂಕಿನ ಎರಡನೇ ಅಲೆಗೆ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಲಕ್ಷಾಂತರ ಜನರು ಈ ಸೋಂಕಿನಿಂದ ಚಡಪಡಿಸುತ್ತಿದ್ದಾರೆ. ಈ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ. ದಿಟ್ಟತನದಿಂದ ನಮ್ಮ ಜನರನ್ನು ಹಾಗೂ ನಮ್ಮನ್ನು ಈ ಸೋಂಕಿನ ದವಡೆಯಿಂದ ರಕ್ಷಿಸಬೇಕಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಲೋಬೊ ಹೇಳಿದ್ದಾರೆ.

ನಾವೆಲ್ಲರೂ ಯಾವುದೇ ಊಹಾಪೋಹಗಳು, ಸುಳ್ಳು ಸುದ್ಧಿ ಅಥವಾ ತಪ್ಪುತಿಳುವಳಿಕೆಗಳಿಗೆ ಬಲಿಯಾಗದೆ ಸರಕಾರದ ಮಾರ್ಗದರ್ಶನವನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಅತ್ಯಗತ್ಯ. ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ತಪ್ಪುತಿಳುವಳಿಕೆ ಹಾಗೂ ಮೂಢನಂಬಿಕೆಗಳಿಗೆ ಬಲಿಯಾಗದೆ, ಕೋವಿಡ್-19 ಸೋಂಕನ್ನು ಸೋಲಿಸಲು ಎಲ್ಲರೂ ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ನಮ್ಮಿಂದ ಇತರ ಅಮಾ ಯಕರು ಸೋಂಕಿಗೆ ಬಲಿಯಾಗುವುದನ್ನು ತಪ್ಪಿಸಲು ಎಲ್ಲರೂ ಗರಿಷ್ಠ ಪ್ರಯತ್ನಿಸಿ ಜಿಲ್ಲೆಯಲ್ಲಿ ಮೇ 10ರಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಪಾಲಿಸಬೇಕು. ಉಡುಪಿ ಧರ್ಮಪ್ರಾಂತದ ಎಲ್ಲಾ 52 ಧರ್ಮಕೇಂದ್ರಗಳೂ ಕಥೊಲಿಕ್ ಸಭಾ, ಯುವ ಸಂಚಲನ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಅಸಹಾಯಕರಿಗೆ ಎಲ್ಲಾ ಸಹಾಯವನ್ನು ನೀಡಲು ಬೇಕಾದ ನೆರವನ್ನು ನೀಡುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News