×
Ad

ಸರಕಾರದ ಕೋವಿಡ್ ಮಾರ್ಗಸೂಚಿ ಗೊಂದಲದ ಗೂಡು: ಸಿಪಿಎಂ

Update: 2021-05-09 18:47 IST

ಉಡುಪಿ, ಮೇ 9: ಕೋವಿಡ್ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಿಜ. ಆದರೆ ಸರಕಾರ ಹೊರಡಿಸಿರುವ ಮಾರ್ಗಸೂಚಿ ಗೊಂದಲದ ಗೂಡಾಗಿದೆ. ಇದರಿಂದ ಪೊಲೀಸರು ಮತ್ತು ಜನರ ಮಧ್ಯೆ ಅನಗತ್ಯ ತಿಕ್ಕಾಟಕ್ಕೆ ಕಾರಣವಾಗುತ್ತದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ.

ನೆರೆಯ ಕೇರಳ ರಾಜ್ಯದಲ್ಲಿ ಅಗತ್ಯ ವಸ್ತುಗಳನ್ನು ಒಳಗೊಂಡ ರೇಷನ್ ಕಿಟ್ ಗಳನ್ನು ನೀಡಲಾಗಿದೆ. ತಮಿಳುನಾಡಿನಲ್ಲಿ ನಗದು ಹಣ ನೀಡುವು ದಲ್ಲದೆ ಹಾಲಿನ ದರ ಕಡಿಮೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ನಗದು ಪರಿಹಾರವಾಗಲಿ, ರೇಷನ್ ಕಿಟ್ ಆಗಲಿ ನೀಡಿಲ್ಲ ಎಂದು ಸಮಿತಿ ದೂರಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೆಳಿಗ್ಗೆ 6 ರಿಂದ 10ರ ವರೆಗೆ ಅನುಮತಿ ನೀಡಬೇಕು. ಉಚಿತ ರೇಷನ್ ತರಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಅನುಮತಿ ನೀಡಬೇಕು. ಕಾರ್ಖಾನೆ, ಕಟ್ಟಡ ಕಾಮಗಾರಿ ಕೆಲಸಗಳಿಗೆ ಹೋಗಿ ಬರಲು ವಾಹನಗಳಿಗೆ ಅನುವು ಮಾಡಿಕೊಡ ಬೇಕು. ಜಿಲ್ಲಾಡಳಿತ ಈ ಬೇಡಿಕೆ ಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News