ಕೈಗಾರಿಕಾ ಸಂಸ್ಥೆಗಳು ಸಿಬ್ಬಂದಿ ವರ್ಗವನ್ನು ವಾಹನದಲ್ಲಿ ಕರೆದೊಯ್ಯಲು ಡಿಸಿ ಸೂಚನೆ
Update: 2021-05-09 20:31 IST
ಮಂಗಳೂರು, ಮೇ 9: ದ.ಕ.ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯ ಸಲುವಾಗಿ ಕೈಗಾರಿಕಾ ಸಂಸ್ಥೆ ಗಳು ತಮ್ಮ ಸಿಬ್ಬಂದಿ ವರ್ಗನ್ನು ವಾಹನಗಳ ಮೂಲಕ ಕೆಲಸದ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ಪ್ರಮುಖ ಕೈಗಾರಿಕೆಗಳು ಕಾರ್ಯಾಚರಿಸುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದಿ ಉದ್ಯೋಗ ನಿಮಿತ್ತ ಸಂಚರಿಸಲು ಖಾಸಗಿ ವಾಹನ ಬಳಸುತ್ತಿದ್ದಾರೆ. ಪ್ರತಿ ಸಿಬ್ಬಂದಿಗೆ ಪ್ರತ್ಯೇಕ ಪಾಸ್ ನೀಡು ವುದು ಕಷ್ಟವಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಗೊಂದಲ ಉಂಟಾಗುವುದನ್ನು ತಡೆಯಲು ಮತ್ತು ವಾಹನ ದಟ್ಟಣೆ ಕಡಿಮೆ ಮಾಡಲು ಕೈಗಾರಿಕಾ ಸಂಸ್ಥೆಗಳು ವಾಹನ ವ್ಯವಸ್ಥೆ ಕಲ್ಪಿಸಿ ಕೋವಿಡ್ ನಿಯಮ ಪಾಲಿಸಿ ಕರೆದೊಯ್ಯಬೇಕು. ಇದು ಸಲಹೆ ಮಾತ್ರ, ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.