ದ.ಕ. ಜಿಲ್ಲೆ : ಕೋವಿಡ್ ಗೆ ಮತ್ತೆ 2 ಬಲಿ; 1,694 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು, ಮೇ 9: ದ.ಕ. ಜಿಲ್ಲೆಯಲ್ಲಿ ರವಿವಾರ 2 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 785ಕ್ಕೇರಿದೆ. ಅಲ್ಲದೆ ರವಿವಾರ ಜಿಲ್ಲೆಯಲ್ಲಿ 1,694 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. 854 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 56,376 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 43,034 ಮಂದಿ ಗುಣಮುಖರಾಗಿದ್ದಾರೆ. ಸದ್ಯ 12,557 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಸ್ಕ್ ನಿಯಮ ಉಲ್ಲಂಸಿದ 52,519 ಮಂದಿಯಿಂದ 54,86,130 ರೂ. ದಂಡ ವಸೂಲು ಮಾಡಲಾಗಿದೆ.
ಸುಳ್ಯ ತಾಲೂಕಿನಲ್ಲಿ 5 ಮತ್ತು ಮಂಗಳೂರಿನ 4 ಸಹಿತ ಜಿಲ್ಲೆಯಲ್ಲಿ ರವಿವಾರ 9 ಕಡೆಗಳಲ್ಲಿ ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ. ಸುಳ್ಯದ ಗುತ್ತಿಗಾರಿನ ಅಮರ ಮುಡ್ನೂರಿನ ಮನೆಯೊಂದರಲ್ಲಿ 8, ಮರ್ಕಂಜ ಅರಂತೋಡಿನಲ್ಲಿ 5, ಮಂಡೆಕೋಲಿನ ದೇವರಗುಂಡದಲ್ಲಿ 6, ಕೊಲ್ಲಮೊಗ್ರು5, ಕೊಲ್ಲಮೊಗ್ರು ಬಟ್ಟೋಡಿಯದಲ್ಲಿ 5, ಮಂಗಳೂರಿನ ಕೋಡಿಕಲ್‌ನಲ್ಲಿ 5, ಕಾವೂರಿನ ಪಾರೆಪಾದೆಯಲ್ಲಿ 5, ಅಂಬ್ಲಮೊಗರು ಗ್ರಾಮದ ಅಂಬೇಡ್ಕರ್ ನಗರದಲ್ಲಿ 5, ಮೂಡುಬಿದಿರೆಯ ಹೊಸಬೆಟ್ಟುವಿನಲ್ಲಿ 5 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.
ಜಿಲ್ಲೆಯ ಪೊಲೀಸರಿಗೆ ಎರಡನೇ ಡೋಸ್ ಲಸಿಕಾ ಅಭಿಯಾನ ರವಿವಾರ ನಡೆದಿದ್ದು, 240 ಮಂದಿಗೆ ಲಸಿಕೆ ನೀಡಲಾಗಿದೆ.