×
Ad

​ಹೊಸ ಮಾರ್ಗಸೂಚಿಯಿಂದ ಕಾರ್ಮಿಕರು ಉಪವಾಸ: ಸಿಐಟಿಯು

Update: 2021-05-09 21:57 IST

ಕುಂದಾಪುರ, ಮೇ 9: ಕೋವಿಡ್ ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳು ತ್ತಿರುವ ಹಿನ್ನ್ನೆಲೆಯಲ್ಲಿ ಸರಕಾರವು ಸೋಮವಾರದಿಂದ ಕೋವಿಡ್ ಹೊಸ ಮಾರ್ಗಸೂಚಿಯು ದಿನಗೂಲಿ ಕಾರ್ಮಿಕರನ್ನು ಉಪವಾಸಕ್ಕೆ ದೂಡು ವಂತದ್ದಾಗಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಆರೋಪಿಸಿದೆ.

ಈಗಾಗಲೇ ಲಾಕ್‌ಡೌನ್ಗೆ ಸಿಕ್ಕು ಕೆಲಸ ಕಳೆದುಕೊಂಡಿರುವ ಖಾಸಗಿ ಬಸ್ಸು ನೌಕರರ ಪರಿಸ್ಥಿತಿ ಏನಾಗಿದೆ? ಆಟೋ ರಿಕ್ಷಾ, ಬಟ್ಟೆ, ಮೊಬೈಲ್ ಅಂಗಡಿಗಳಲ್ಲಿ, ಖಾಸಗಿ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರ ಪರಿಸ್ಥಿತಿ ಕೇಳು ವವರಿಲ್ಲದಂತಾಗಿದೆ. ಈ ಹಿಂದೆಯೂ ಕೂಡ ಪರಿಹಾರ ಸಿಕ್ಕಿಲ್ಲವಾಗಿತ್ತು. ಸರಕಾರ ಇನ್ನಾದರೂ ಮಾನವೀಯತೆಯಿಂದ ವರ್ತಿಸಿ ಪರಿಹಾರ ಒದಗಿಸಬೇಕು ಎಂದು ಸಿಐಟಿಯು ಒತ್ತಾಯಿಸಿದೆ.

ಕಠಿಣ ಪರಿಸ್ಥಿತಿಯಲ್ಲಿ ಇಂತಹ ಲಾಕ್ಡೌನ್ ಮರುಪರಿಶೀಲಿಸಿ ಕಾರ್ಮಿಕರಿಗೆ ದುಡಿದು ತಿನ್ನಲು ಅವಕಾಶ ಮಾಡಿ ಕೊಡಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News