×
Ad

ರೆಡ್‌ಕ್ರಾಸ್ ಕೋವಿಡ್ ನಿಯಂತ್ರಣದಲ್ಲಿ ಜನರ ನೆರವಿಗೆ ಸದಾ ಸಿದ್ಧ: ದ.ಕ.ಜಿಲ್ಲಾ ಮುಖಂಡ

Update: 2021-05-09 22:49 IST

ಮಂಗಳೂರು : ಜಗತ್ತಿನಾದ್ಯಂತ 192 ದೇಶಗಳಲ್ಲಿ ಹಲವು ವಿಪತ್ತುಗಳು ಎದುರಾದಾಗ ಮಾನವೀಯ ನೆಲೆ ಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಘಟನೆಯ ಸಹಯೋಗವನ್ನು ಹೊಂದಿರುವ ಭಾರತೀಯ ರೆಡ್ ಕ್ರಾಸ್ ಸೊಸೈಟಿ (ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ಸ್ವಾತಂತ್ರ ಪೂರ್ವದಿಂದಲೂ ಸ್ವಯಂ ಸೇವಾ ಸಂಘಟನೆಯಾಗಿ ಸಮಸ್ತ ಮನುಕುಲದ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.

1920ರಲ್ಲಿ ದೇಶದಲ್ಲಿ ಸಂಸತ್ತಿನ ಕಾಯಿದೆಯ ಪ್ರಕಾರ ರಚನೆಗೊಂಡ ರೆಡ್ ಕ್ರಾಸ್ ಸಂಘಟನೆಯ ಸ್ವಾತಂತ್ರದ ಬಳಿಕ 1992 ರಲ್ಲಿ ತಿದ್ದು ಪಡಿಯೊಂದಿಗೆ ರಚನೆಗೊಂಡಿದೆ.1994ರಲ್ಲಿ ಸೂಕ್ತ ನಿಯಮಗಳು ರಚನೆಗೊಂಡು ದೇಶದ ರಾಷ್ಟ್ರಪತಿ ಪದನಿಮಿತ್ತ ಅಧ್ಯಕ್ಷರಾಗಿ ಹಾಗೂ ದೇಶದ ಆರೋಗ್ಯ ಸಚಿವರು ರೆಡ್‌ಕ್ರಾಸ್ ಸೊಸೈಟಿಯ ಚಯರ್ ಮನ್ ಆಗಿ ಇರುವ ಸಂಘಟನೆ ದೇಶದ ಎಲ್ಲಾ ರಾಜ್ಯಗಳಲ್ಲಿ , ಕೇಂದ್ರಾಡಳಿತ ಪ್ರದೇಶ ಸೇರಿದಂತೆ 1100 ಶಾಖೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ರಾಜ್ಯಗಳಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಅಧ್ಯಕ್ಷರಾಗಿರುವ ಈ ಸಂಘಟನೆಗೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಪದನಿಮಿತ್ತ ಅಧ್ಯಕ್ಷರಾಗಿ ಹಾಗೂ ಆಯಾ ಜಿಲ್ಲೆಗಳಲ್ಲಿ ರೆಡ್ ಕ್ರಾಸ್ ಸದಸ್ಯರಿಂದ ಚುನಾಯಿತ ಚಯರ್‌ಮನ್‌ಗಳ ನೇತ್ರತ್ವದಲ್ಲಿರುವ ಆಡಳಿತ ಸಮಿತಿ ಕಾರ್ಯ ನಿರ್ವಹಿಸುತ್ತಾ ಇದೆ. ಕೋವಿಡ್-19 ದೇಶಾದ್ಯಂತ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲೂ ಜಗತ್ತಿನಾದ್ಯಂತ ರೆಡ್‌ಕ್ರಾಸ್ ಸಂಘಟನೆಯ ಸದಸ್ಯರು ಅಮೂಲ್ಯವಾದ ಸೇವಾಚಟುವಟಿಕೆಯಲ್ಲಿ ತೊಡಗಿದ್ದಾರೆ. ದಕ್ಷಿಣ ಕನ್ನಡ ರೆಡ್‌ಕ್ರಾಸ್ ಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಚುನಾಯಿತ ಆಡಳಿತ ಮಂಡಳಿಯ ಚಯರ್ ಮನ್ ಶಾಂತರಾಮ ಶೆಟ್ಟಿಯವರು,ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹಾಗೂ ರೆಡ್ ಕ್ರಾಸ್ ಸಮಿತಿಯ ರಾಜ್ಯ ವಿಪತ್ತು ನಿರ್ವಹಣಾ ಉಪ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಯವರು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ರೆಡ್ ಕ್ರಾಸ್ ಬಗ್ಗೆ ತಮ್ಮ ಅಭಿಪ್ರಾಯ ವನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News