×
Ad

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ : ದ.ಕ.ಜಿಲ್ಲೆಯಲ್ಲಿ 306 ವಾಹನಗಳು ವಶ

Update: 2021-05-10 21:42 IST

ಮಂಗಳೂರು, ಮೇ 10: ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಸೋಮವಾರ 23 ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ 306 ವಾಹನಗಳನ್ನು ವಶ ಪಡಿಸಲಾಗಿದೆ. 637 ಮಂದಿಯ ವಿರುದ್ಧ ಮಾಸ್ಕ್ ಉಲ್ಲಂಘನೆ ಕೇಸು ದಾಖಲಿಸಲಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ಉಲ್ಲಂಘನೆ ಕಾಯ್ದೆಯಡಿ 22 ಕೇಸ್, 178 ವಾಹನ ವಶ, ಮಾಸ್ಕ್ ಉಲ್ಲಂಘನೆಯ 325 ಪ್ರಕರಣ ದಾಖಲಾಗಿದೆ.

ಜಿಲ್ಲಾ ಗ್ರಾಮಾಂತರದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ಉಲ್ಲಂಘನೆ ಕಾಯ್ದೆಯಡಿ 1 ಕೇಸ್, ಮಾಸ್ಕ್ ಉಲ್ಲಂಘನೆಯ 312 ಪ್ರಕರಣ ಹಾಗೂ 128 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News