ಪೊಲೀಸ್ ಲಾಠಿ ಭೀತಿ: ಗಮನ ಸೆಳೆದ ಸೈಕಲ್ ಸವಾರ
Update: 2021-05-10 22:42 IST
ಕುಂದಾಪುರ, ಮೇ 10: ಸಂಪೂರ್ಣ ಲಾಕ್‌ಡೌನ್‌ನಲ್ಲಿ ಪೊಲೀಸರು ಕಠಿಣ ಕ್ರಮ ಜರಗಿಸುವ ಭೀತಿಯಲ್ಲಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸೈಕಲ್ ಸವಾರರೊಬ್ಬರು ವಿಶಿಷ್ಟ ರೀತಿಯಲ್ಲಿ ಕಾಣುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕುಂಭಾಶಿಯ ವಿನೇಂದ್ರ ಆಚಾರ್ಯ ಎಂಬವರು ಪೊಲೀಸರ ಲಾಠಿ ಏಟಿಗೆ ರಕ್ಷಣೆಯಾಗಿ ತಲೆಗೆ ಹೆಲ್ಮೆಟ್ ಧರಿಸಿಕೊಂಡು, ಬೆನ್ನಿಗೆ ತಗಡಿನ ಶೀಟ್ ಕಟ್ಟಿ ಕೊಂಡು ಸೈಕಲ್‌ನಲ್ಲಿ ತೆರಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಷದಲ್ಲಿ ಅವರು ಪೇಟೆಗೆ ತೆರಳಿ ಅಗತ್ಯ ವಸ್ತುಗಳನ್ನು ತೆಗೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ.