×
Ad

ಮಂಗಳವಾರ 45+ ವಯಸ್ಸಿನವರಿಗೆ 2ನೇ ಡೋಸ್ ಲಸಿಕೆ ಲಭ್ಯ

Update: 2021-05-10 22:49 IST

ಉಡುಪಿ, ಮೇ 10: ಜಿಲ್ಲಾಸ್ಪತ್ರೆಯ ಸೈಂಟ್ ಸಿಸಿಲೀಸ್ ಶಾಲೆಯ ಲಸಿಕಾ ಕೇಂದ್ರದಲ್ಲಿ ಮಂಗಳವಾರ 45 ವರ್ಷ ಮೇಲ್ಪಟ್ಟ 100 ಮಂದಿಗೆ ಕೋವಿಶೀಲ್ಡ್‌ನ ಎರಡನೇ ಲಸಿಕೆ ಲಭ್ಯವಿದೆ. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದು 8 ವಾರ ಮೀರಿದವರಿಗೆ ಮಂಗಳವಾರ ಎರಡನೇ ಡೋಸ್ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

18ರಿಂದ 44 ವಯೋಮಿತಿಯ ಫಲಾನುಭವಿಗಳಲ್ಲಿ 150 ಮಂದಿಗೆ ನಾಳೆ ಮೊದಲ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಆನ್‌ಲೈನ್‌ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡು ಸೆಷನ್ಸ್ ಸೈಟ್ ಸಿಕ್ಕಿದವರು ಮಾತ್ರ ಬಂದು ಲಸಿಕೆಯನ್ನು ಪಡೆದುಕೊಳ್ಳಬಹುದು.

ಸರಕಾರಿ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 18ರಿಂದ 44 ವರ್ಷದ 150 ಮಂದಿಗೆ ಕೋವಿಶೀಲ್ಡ್ ಲಸಿಕೆ ಲಭ್ಯವಿರುತ್ತದೆ. ಇವರು ಲಸಿಕಾ ಶಿಬಿರಕ್ಕೆ ತೆರಳುವಾಗ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ ಸ್ಪೆಷಲ್ ರಿಜಿಸ್ಟ್ರೇಶನ್ ನಂಬರ್ ಇರುವ ಎಸ್‌ಎಂಎಸ್‌ನ್ನು ಪೊಲೀಸರಿಗೆ ತೋರಿಸಿ ಲಸಿಕಾ ಕೇಂದ್ರಕ್ಕೆ ಬರಬಹುದು.

18ರಿಂದ 44ವರ್ಷದೊಳಗಿನ ಕೋವಿನ್ ಸೈಟ್‌ನಲ್ಲಿ ಅಥವಾ ಆರೋಗ್ಯ ಸೇತು ಆಪ್ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೊಂದಣಿ ಮಾಡಬಹುದಾಗಿದೆ. ಲಸಿಕಾ ಕೇಂದ್ರಕ್ಕೆ ಬರುವ ಮೊದಲು ಲಸಿಕಾ ಕೇಂದ್ರ ಆಯ್ಕೆ ಮಾಡಿರುವ ದೃಢೀಕರಣ ಮಾಹಿತಿ, ಆಧಾರ್ ಕಾರ್ಡ್, ಸಿಕ್ರೇಟ್ ಕೋಡ್ ಹೊಂದಿರುವ ಮಾಹಿತಿ ಮೊಬೈಲ್‌ನಲ್ಲಿ ಕಡ್ಡಾಯವಾಗಿರಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News