ಭಟ್ಕಳ : ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ವಾಹನ ಬಳಕೆಗೆ ಅವಕಾಶ ಕಲ್ಪಿಸುವಂತೆ ಎಸ್ಡಿಪಿಐ ಆಗ್ರಹ

Update: 2021-05-10 17:37 GMT

ಭಟ್ಕಳ : ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು ಜನರ ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ದಿನ ಮತ್ತು ಸಮಯ ನಿಗದಿ ಪಡಿಸದ್ದರೂ ದಿನ ಬಳಕೆಯ ವಸ್ತು ಖರೀದಿಸಲು ವಾಹನ ಬಳಸಬಾರದು ಎಂಬ ಆದೇಶ ಜಾರಿಗೆ ತಂದಿದೆ. ಕೆಲವು ನಗರಗಳನ್ನು ಹೂರತುಪಡಿಸಿ ಗ್ರಾಮಾಂತರ ಭಾಗಗಳಲ್ಲಿ ವಾಸಿಸುವ ಹೆಚ್ಚಿನ ಜನರು ದಿನ ಬಳಕೆಯ ವಸ್ತು ಖರೀದಿ ಮಾಡಲು ಹತ್ತಿರದಲ್ಲಿ ಅಂಗಡಿಗಳು ಕೂಡ ಇಲ್ಲದೆ ಕಿಲೋ ಮೀಟರ್ ಗಟ್ಟಲೆ ನಡೆದು ಕೊಂಡು ಬರಲು ಸಾಧ್ಯವಿರುವುದಿಲ್ಲ. ನಿಗದಿತ ಸಮಯದಲ್ಲಿ ಅಷ್ಟು ದೂರ ಬಂದು ಖರೀದಿ ಮಾಡಬೇಕು ಎಂಬ ತೀರ್ಮಾನ  ಸರಿಯಲ್ಲ ಅದೇ ರೀತಿ ಸಣ್ಣ ಪುಟ್ಟ ಕಾಯಿಲೆಗೆ ವೈದ್ಯರ ಬಳಿ ಆಟೋ ಮಾಡಿಕೊಂಡು ಹೋಗುತ್ತಿದ್ದ ಜನರು ಈಗ ಆಂಬುಲೆನ್ಸ್ ನಲ್ಲಿ ಹೋಗಬೇಕು ಎಂದು ಹೇಳುವಾಗ ಸಹಜವಾಗಿ ಹೆದರಿ ಮನೆಯಲ್ಲೇ ಸುಲಭದಲ್ಲಿ ಸಿಗುವ ಮದ್ದು ಸೇವಿಸಿ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಕೂಡ ಹೆಚ್ಚು ಆದುದರಿಂದ ಸಂಭಂದಪಟ್ಟವರು  ಈ ಬಗ್ಗೆ ಕೂಡಲೇ ಮಧ್ಯ ಪ್ರವೇಶ ಮಾಡಿ ಜನಸಾಮಾನ್ಯರ ಸಂಕಷ್ಟ ಮನಗಂಡು  ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ವಾಹನ ಬಳಸಲು ಅನುವು ಮಾಡಿ ಕೊಟ್ಟು  ಜನರ ಸಮಸ್ಯೆ ಪರಿಹರಿಸಿ ಕೊಡಬೇಕೆಂದು ಎಸ್ಡಿಪಿಐ. ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ತೌಫೀಕ ಬ್ಯಾರಿ ಆಗ್ರಹಿಸಿದ್ದಾರೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News