×
Ad

ಜಿಲ್ಲಾ ಕಾಂಗ್ರೆಸ್ ಕೋವಿಡ್ ಕಾರ್ಯಪಡೆಗೆ ಮಾಜಿ ಶಾಸಕ ಜೆ.ಆರ್.ಲೋಬೋ ಅವರಿಂದ ಅ್ಯಂಬುಲೆನ್ಸ್ ಕೊಡುಗೆ

Update: 2021-05-11 13:14 IST

 ಮಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್  ಕೋವಿಡ್-19 ಟಾಸ್ಕ್ ಫೋರ್ಸ್‌ ಸಮಿತಿ ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಕೊಡುಗೆಯಾಗಿ ನೀಡಿದ ಅ್ಯಂಬುಲೆನ್ಸ್ ವಾಹನಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ,ಮನಪಾ ವಿಪಕ್ಷ ನಾಯಕ ವಿನಯರಾಜ್,ಹಾಗೂ ಇತರ ಕಾಂಗ್ರೆಸ್ ಪದಾಧಿಕಾರಿಗಳಾದ ಸುಭೋದ್ ಆಳ್ವ, ಮುಹಮ್ಮದ್ ಕುಂಜತ್ತಬೈಲ್,ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ದಾಸ್,ಸತೇಶ್ ಶೆಟ್ಟಿ, ಟಿ.ಕೆ.ಸುಧೀರ್, ಅಶ್ರಫ್, ಸಂಶುದ್ದೀನ್, ರಮಾನಂದ, ಯೋಗೀಶ್, ನೀರಜ್ ಪಾಲ್ ಮೊದಲಾವರು ಉಪಸ್ಥಿತರಿದ್ದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅ್ಯಂಬುಲೆ ನ್ಸ್ ಅಗತ್ಯ ಇರುವವರು ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಸಂಪರ್ಕಿಸಿ ಉಚಿತ ಸೇವೆಯ ನ್ನು ಪಡೆದುಕೊಳ್ಳಬಹುದು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News