×
Ad

ಸಚಿವ ಈಶ್ವರಪ್ಪರ ಹೇಳಿಕೆ ಸರಕಾರದ ವೈಫಲ್ಯತೆಗೆ ಸಾಕ್ಷಿಯಾಗಿದೆ : ಎಸ್ಡಿಟಿಯು

Update: 2021-05-11 14:05 IST

ಬೆಂಗಳೂರು, ಮೇ.10: ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಷ್ವರಪ್ಪನವರು "ದುಡಿಯುವ ವರ್ಗಕ್ಕೆ ಪರಿಹಾರ ನೀಡಲು ನಾವೇನು ದುಡ್ಡು ಪ್ರಿಂಟ್ ಮಾಡ್ತೀವಾ" ಎಂಬ ಹೇಳಿಕೆಯನ್ನು ಖಂಡಿಸುವುದಾಗಿ ಎಸ್ಡಿಟಿಯು ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದು, ಮಾತ್ರವಲ್ಲ ಕೋವಿಡ್ ಕಷ್ಟ ಕಾಲದಲ್ಲಿ ಸರಕಾರದ ವೈಫಲ್ಯತೆಗೆ ಸಾಕ್ಷಿಯದ ಹೇಳಿಕೆಯಾಗಿದೆ ಎಂದು ಎಸ್ಡಿಟಿಯು ಅಭಿಪ್ರಾಯ ವ್ಯಕ್ತಪಡಿಸಿದೆ.

ದುಡಿಯುವ ವರ್ಗದ ಕುಟುಂಬ ನಿರ್ವಹಣೆಯ ಬಗ್ಗೆ ಕಿಂಚಿತ್ ಆಲೋಚನೆ ಇಲ್ಲದ ಸರಕಾರ ಶ್ರಮಿಕರ ಯಾವುದೇ ಆಶೋತ್ತರಗಳನ್ನೂ ಈಡೇರಿಸದೆ ಹದಿನೈದು ದಿನಗಳ ಲಾಕ್ಡೌನ್ ಘೋಷಿಸಿದ್ದು ಇದು ಇನ್ನೂ ಮುಂದುವರಿಯುವ ಆತಂಕದಲ್ಲಿ ಶ್ರಮಿಕ ವರ್ಗ ದಿನದೂಡುತ್ತಿದೆ. ಸರಕಾರ ಇದುವರೆಗೂ ಕಾರ್ಮಿಕರಿಗೆ ಪರಿಹಾರ ಅಥವಾ ಆಹಾರದ ಭದ್ರತೆ ನೀಡದೆ ಲಾಕ್ ಡೌನ್ ಘೋಷಿಸಿ ದುಡಿಯುವ ವರ್ಗವನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಸಂಕಷ್ಟದ ಸಮಯದಲ್ಲಿ ಸರಕಾರದ ಮಂತ್ರಿಗಳಾದ ಈಶ್ವರಪ್ಪನವರ ಹೇಳಿಕೆ ಸರಕಾರ ಸಂಪೂರ್ಣವಾಗಿ ವೈಫಲ್ಯವಾಗಿರುವುದಕ್ಕೆ ಕೈಗನ್ನಡಿಯಾಗಿರುತ್ತದೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್(ಎಸ್ಡಿಟಿಯು) ರಾಜ್ಯಾದ್ಯಕ್ಷರಾದ ಅಬ್ದುಲ್ ರಹೀಂ ಪಟೇಲ್ ಕಳವಳ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ಧನ ಘೋಷಿಸಬೇಕು ಎಂದು ಎಸ್ಡಿಟಿಯು ಸರಕಾರವನ್ನು ಆಗ್ರಹಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News