ಸುದೆಮುಗೆರು: ಆರು ಮನೆಗಳ ಹತ್ತು ಮಂದಿಗೆ ಕೊರೋನ ಪಾಸಿಟಿವ್; ಸೀಲ್ ಡೌನ್
ಬೆಳ್ತಂಗಡಿ; ನಗರದ ಸುದೆಮುಗೆರು ಪರಿಸರದ 78ಮನೆಗಳಿಗೆ ಹೇರಲಾಗಿದ್ದ ಸೀಲ್ ಡೌನ್ ನಿರ್ಬಂಧವನ್ನು ತಾಲೂಕು ಆಡಳಿತ ಸರಳಗೊಳಿಸಿದ್ದು ಇದೀಗ ರಸ್ತೆಗೆ ಹಾಕಲಾಗಿದ್ದ ತಡೆ ಬೇಲಿಯನ್ನು ತೆರವುಗೊಳಿಸಲಾಗಿದ್ದು, ಕೋವಿಡ್ ಲಾಸಿಟಿವ್ ಪ್ರಕರಣ ಕಾಣಿಸಿಕೊಂಡ ಆರು ಮನೆಗಳನ್ನು ಮಾತ್ರ ಸೀಲ್ ಡೌನ್ ಮಾಡಿದೆ.
ಸುದೆಮುಗೆರುವಿನಲ್ಲಿ ಆರು ಮನೆಗಳ ಹತ್ತು ಮಂದಿಗೆ ಕೊರೋನ ಪಾಸಿಟಿವ್ ಬಂದಿತ್ತು ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇಲ್ಲಿನ ಮುಖ್ಯ ರಸ್ತೆಗೆ ಬೇಲಿ ಹಾಕಿ 78 ಮನೆಗಳನ್ನೂ ಸೀಲ್ ಡೌನ್ ಮಾಡಿ ಯಾರೂ ಹೊರಬರದಂತೆ ಮಾಡಿದ್ದರು. ಕೂಲಿ ಕಾರ್ಮಿಕರೇ ಹೆಚ್ವಾಗಿರುವ ಈ ಪ್ರದೇಶದಲ್ಲಿ ಜನರ ಕಷ್ಟದ ಬಗ್ಗೆ ತಿಳಿದ ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಹಾಗು ಸಿಪಿಐಎಂ ಮುಖಂಡರುಗಳು ಸೋಮವಾರ ಅಲ್ಲಿನ ಮನೆಯವರಿಗೆಅಗತ್ಯ ಸಾಮಗ್ರಿಗಳ ಕಿಟ್ ನೀಡಲು ಹೋದ ವೇಳೆ ಜನರು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಬಂಗೇರ ಅವರು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿನ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡು ಕೂಡಲೇ ಅನಗತ್ಯವಾಗಿ ಹಾಕಲಾಗಿರುವ ಬೇಲಿಗಳನ್ಬು ತೆರವು ಮಾಡುವಂತೆ ಸೂಚಿಸಿದ್ದರು.
ಸೀಲ್ಡೌನ್ ಮಾಡಿ ಮೂರು ದಿನಗಳ ಬಳಿಕ ಬಂಗೇರರು ಕರೆ ಮಾಡಿದ ಮೇಲೆ ಪಟ್ಟಣ ಪಂಚಾಯತಿನ ಅಧಿಕಾರಿಗಳು ಸುದೆಮುಗೆರುವಿಗೆ ಬಂದಿದ್ದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನರು ಕೇವಲ ಆರು ಮನೆಗಳಲ್ಲಿ ರೋಗಿಗಳಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೀಗಿದ್ದರೂ ಇಡೀ ಊರನ್ನು ದಿಗ್ಬಂಧನದಲ್ಲಿ ಇರಿಸಲಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು ಇದಾದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೇ ರಸ್ತೆಗೆ ಅಡ್ಡಲಾಗಿ ಹಾಕಿದ್ದ ತಡೆಬೇಲಿಯನ್ನು ತೆರವುಗೊಳಿಸಿದರು.
ರೋಗ ಕಾಣಿಸಿಕೊಂಡ ಆರು ಮನೆಗಳನ್ನು ಸೀಲ್ ಡೌನ್ ಮಾಡಿ ಇನ್ನು ಯಾರಿಗಾದರೂ ರೋಗ ಕಾಣಿಸಿಕೊಂಡರೆ ಆ ಮನೆಗಳನ್ನೂ ಸೀಲ್ಡೌನ್ ಮಾಡುವುದಾಗಿ ತಿಳಿಸಿದ್ದಾರೆ. ಸೀಲ್ಡೌನ್ ಆಗಿರುವ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ತಾವೇ ಒದಗಿಸುವುದಾಗಿ ಸ್ಥಳೀಯ ಜನರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.