×
Ad

ಬಂದೋಬಸ್ತ್ ನಡುವೆ ತುಳುನಾಡಿನ ಪುಂಡಿ ತಿಂಡಿಯ ರುಚಿ ಸವಿದ ಪೊಲೀಸ್ ಕಮಿಷನರ್

Update: 2021-05-11 16:39 IST

ಮಂಗಳೂರು : ಲಾಕ್ಡೌನ್ ಬಂದೋಬಸ್ತ್ ಕಾರ್ಯದ ನಡುವೆ ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ನಿಂತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತುಳುನಾಡಿನ ಸಾಂಪ್ರದಾಯಿಕ ತಿಂಡಿ ಪುಂಡಿ (ರೈಸ್ ಬಾಲ್) ಸವಿದರು.

ಇಂದು ಬೆಳಗ್ಗೆ ಸುಮಾರು 1030ರ ವೇಳೆಗೆ ಲಾಕ್ಡೌನ್ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕ್ಲಾಕ್ ಟವರ್ ಬಳಿ ಪರಿಶೀಲನೆಗೆ ಆಗಮಿಸಿದ್ದರು.

ಆಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಕಮಿಷನರ್ ಗೆ ಪುಂಡಿ ಹಾಗೂ ಸಾಂಬಾರ್ ನೀಡಿದರೆ ತಾನು ಐಪಿಎಸ್ ಅಧಿಕಾರಿ ಎಂಬ ಯಾವುದೇ ಬಿಗುಮಾನವಿಲ್ಲದೆ ಸಿಬ್ಬಂದಿ ಜತೆ ನಡು ರಸ್ತೆಯಲ್ಲಿ ನಿಂತು ತಿಂಡಿ ತಿನ್ನುತ್ತಾ ತುಂವಾ ರುಚಿಯಾಗಿದೆ ಎಂದರು. ವ್ಯವಸ್ಥೆ ಮಾಡಿದ್ದ ಸಿಬ್ಬಂದಿಗೂ ಅವರು ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News