×
Ad

ರಮಝಾನ್ ಕಿಟ್ ವಿತರಣೆ

Update: 2021-05-11 16:54 IST

ಉಡುಪಿ, ಮೇ 11: ಸಾಂತ್ವನ ಸೇವೆಯಲ್ಲಿರುವ ತಾಜುಲ್ ಉಲಮಾ ರಿಲೀಫ್ ಸೆಲ್ ಉಡುಪಿ ಡಿವಿಷನ್ ವತಿಯಿಂದ 6ನೇ ವರ್ಷದ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಅಂಬಾಗಿಲಿನಲ್ಲಿರುವ ಡಿವಿಷನ್ ಕಛೇರಿಯಲ್ಲಿ ಜರಗಿತು.

ಅಧ್ಯಕ್ಷತೆಯನ್ನು ಡಿವಿಷನ್ ಅಧ್ಯಕ್ಷ ರಝಾಕ್ ಉಸ್ತಾದ್ ಅಂಬಾಗಿಲು ವಹಿಸಿ ದ್ದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಸುಲೈಮಾನ್ ರಂಗನಕೆರೆ, ಕಾರ್ಯ ದರ್ಶಿಗಳಾದ ನವಾಝ್ ಉಡುಪಿ, ಬಿಲಾಲ್ ಮಲ್ಪೆ, ಸಲ್ಮಾನ್ ಮಣಿಪುರ, ಕೆ.ಸಿ.ಎಫ್. ನಾಯಕ ತೌಫೀಕ್ ಅಂಬಾಗಿಲು ಉಪಸ್ಥಿತರಿ ದ್ದರು. ಪ್ರಧಾನ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News