ಬಳಸಿದ ಪಿಪಿಇ ಕಿಟ್, ಮಾಸ್ಕ್ ಮನೆ ತ್ಯಾಜ್ಯದ ಜತೆ ಬೆರಸದಿರಿ: ಮನಪಾ
Update: 2021-05-11 17:01 IST
ಮಂಗಳೂರು, ಮೇ 11: ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಜತೆ, ಬಳಸಿದ ಪಿಪಿಇ ಕಿಟ್, ಮಾಸ್ಕ್ ಅಥವಾ ಇತರ ಬಯೋ ಸ್ಯಾನಿಟರ್ ವೇಸ್ಟನ್ನು ಬೆರಸದೆ ಪ್ರತ್ಯೇಕವಾಗಿ ನೀಡಬೇಕೆಂದು ಸಾರ್ವಜನಿಕರಿಗೆ ಮನಪಾ ಆಯುಕ್ತರು ಮನವಿ ಮಾಡಿದ್ದಾರೆ.
ಪಾಲಿಕೆ ವ್ಯಾಪ್ತಿಯೊಳಗೆ 2ನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಬಹುತೇಕ ಮನೆಗಳು ಹೋಂ ಐಸೋಲೇಶನ್‌ಗೆ ಒಳಪಟ್ಟಿವೆ. ಈ ನಿಟ್ಟಿನಲ್ಲಿ ಮನೆ ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವ ಮಹತ್ತರ ಜವಾಬ್ಧಾರಿ ಪಾಲಿಕೆಯದ್ದಾಗಿದೆ. ಈ ಕೋವಿಡ್ ಸಮಯದಲ್ಲಿ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಇತರ ಸ್ವಚ್ಚತಾ ಸಿಬ್ಬಂದಿಯ ಆರೋಗ್ಯವನ್ನು ಕಾಪಾಡಲು ಸಾರ್ವಜನಿಕರು ಈ ಮೂಲಕ ಸಹಕಾರ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.