ಕೊರೋನ ನಿಯಮ ಉಲ್ಲಂಘಿಸಿ ಮದುವೆ ಪಾರ್ಟಿಯಲ್ಲಿ ಸಮೂಹ ನೃತ್ಯ : ಪೊಲೀಸರಿಂದ ಪ್ರಕರಣ ದಾಖಲು

Update: 2021-05-11 13:09 GMT

ಮಂಗಳೂರು, ಮೇ 11: ಕೊರೋನ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ನಿಯಮಗಳನ್ನು ಉಲ್ಲಂಘಿಸಿ ನಗರ ಹೊರವಲಯದ ಅಡ್ಯಾರ್‌ನಲ್ಲಿ ಮದುವೆ ಪಾರ್ಟಿ ಆಯೋಜಿಸಿದವರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಯಾರ್‌ನ ಯುವಕನೊಬ್ಬನ ಮದುವೆ ರವಿವಾರ ಸಿದ್ಧಕಟ್ಟೆಯಲ್ಲಿರುವ ಯುವತಿಯ ಮನೆಯಲ್ಲಿ ನಡೆದಿತ್ತು. ಅವರು 25 ಜನರಿಗೆ ಗ್ರಾಪಂನಿಂದ ಅನುಮತಿ ಪಡೆದಿದ್ದರು.

ಕೊರೋನ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸದೆ ಸುರಕ್ಷಿತ ಅಂತರ ಕಾಪಾಡದೆ ಡಿಜೆ ಹಾಕಿ ಯುವಕ, ಯುವತಿಯರು ಸಮೂಹ ನೃತ್ಯ ಮಾಡಿರುವ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಭಾಗವಹಿಸಿರುವವರೇ ವೀಡಿಯೊ ಮಾಡಿ ವೈರಲ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ವಿಚಾರ ಜಿಲ್ಲಾಧಿಕಾರಿಯ ಗಮನಕ್ಕೆ ಬಂದಿದ್ದು, ತಕ್ಷಣ ಅವರು ತಹಶೀಲ್ದಾರ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತಹಶೀಲ್ದಾರ್ ಅಡ್ಯಾರ್ ಪಿಡಿಒ ಅವರಿಂದ ಮಾಹಿತಿ ಪಡೆದಿದ್ದಾರೆ. ಪಿಡಿಒ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾರ್ಟಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News