ಬ್ರಹ್ಮಗಿರಿ ಮಸೀದಿಯಲ್ಲಿ ಈದ್ ಪ್ರಾರ್ಥನೆ ಇಲ್ಲ
Update: 2021-05-11 20:15 IST
ಉಡುಪಿ, ಮೇ 11: ಕೋವಿಡ್ -19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರುವ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಕಾರಣದಿಂದಾಗಿ ಬ್ರಹ್ಮಗಿರಿ ನಾಯರ್ ಕೆರೆಯ ಹಶಿಮಿ ಮಸೀದಿಯಲ್ಲಿ ಈದುಲ್ ಫಿತರ್ ವಿಶೇಷ ನಮಾಝ್ ಏರ್ಪ ಡಿಸುವುದಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಮನೆಗಳಲ್ಲಿ ಈದ್ ಆಚರಿಸೇಕು ಎಂದು ಆಡಳಿತ ಸಮಿತಿ ತಿಳಿಸಿದೆ.
ಮನೆಯಲ್ಲಿ ಅತಿಥಿಗಳನ್ನು ಆಹ್ವಾನಿಸಬಾರದು. ತಬ್ಬಿಕೊಳ್ಳುವುದು ಅಥವಾ ಕೈಕುಲುಕುವ ಮೂಲಕ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳ ಬಾರದು. ರಾಜ್ಯ ಆಡಳಿತ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈ ಮಧ್ಯೆ ಮಸೀದಿ ಅಧ್ಯಕ್ಷ ಜಕ್ರಿಯಾ ಅಸ್ಸಾದಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಇಕ್ಬಾಲ್ ಮನ್ನಾ ಜಂಟಿಯಾಗಿ ಎಲ್ಲ ಸದಸ್ಯರನ್ನು ವಿನಂತಿಸಿಕೊಂಡಿದ್ದಾರೆ.